Saturday, 14th December 2024

ಯೂರೊ ಕಪ್‌ ಫುಟ್‌ಬಾಲ್: ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಇಟಲಿ

ಲಂಡನ್: ಸತತ 12ನೇ ಪಂದ್ಯದಲ್ಲಿ ಜಯ ಸಾಧಿಸಿದ ಇಟಲಿ ತಂಡವು ಯೂರೊ ಕಪ್‌ ಫುಟ್‌ ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ.

ವೆಂಬ್ಲಿ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ 2-1ರಿಂದ ಆಸ್ಟ್ರಿಯಾ ತಂಡ ವನ್ನು ಸೋಲಿಸಿತು. ಜಿದ್ದಾಜಿದ್ದಿನ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಎಲ್ಲ ಗೋಲುಗಳೂ ಹೆಚ್ಚು ವರಿ ಅವಧಿಯಲ್ಲೇ ದಾಖಲಾದವು.

ಫೆಡರಿಕೊ ಚೈಸಾ 95ನೇ ನಿಮಿಷದಲ್ಲಿ ಇಟಲಿಯ ಗೋಲಿನ ಖಾತೆ ತೆರೆದರು. 105ನೇ ನಿಮಿಷದಲ್ಲಿ ಮ್ಯಾಟೆಯೊ ಪೆಸ್ಸಿನಾ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. 114ನೇ ನಿಮಿಷದಲ್ಲಿ ಸಸಾ ಕಲಾಜಿಕ್‌ ಅವರು ಆಸ್ಟ್ರಿಯಾ ಪರ ಒಂದು ಗೋಲು ದಾಖಲಿಸಿದರು.

ಇನ್ನೊಂದು ಪಂದ್ಯ ಹಾಲಿ ಚಾಂಪಿಯನ್ ಪೋರ್ಚುಗಲ್‌ ಮತ್ತು ಬೆಲ್ಜಿಯಂ ತಂಡಗಳ ನಡುವೆ ನಡೆಯಲಿದೆ. ಇಲ್ಲಿನ ವಿಜೇತರನ್ನು ಇಟಲಿ ತಂಡ ಎದುರಿಸಲಿದೆ. ಕ್ವಾರ್ಟರ್‌ಫೈನಲ್ ಪಂದ್ಯವು ಶುಕ್ರವಾರ ನಡೆಯಲಿದೆ.