Wednesday, 11th December 2024

ಅತಿ ಹೆಚ್ಚು ಟೆಸ್ಟ್ ಪಂದ್ಯ ಆಡಿದ ಎರಡನೇ ಆಟಗಾರ ಜೇಮ್ಸ್‌ ಆಂಡರ್ಸನ್‌

ಲಂಡನ್: ಜೇಮ್ಸ್ ಆಂಡರ್ಸನ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಮತ್ತು ಮೊದಲ ಇಂಗ್ಲೆಂಡ್ ಆಟಗಾರ. ಆಂಡರ್ಸನ್‌ ಅವರು 183 ರೆಡ್ ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

ಇದು ಜೇಮ್ಸ್‌ ಅವರ ಕೊನೆಯ ಭಾರತದ ಪ್ರವಾಸ ಎಂದು ಭಾವಿಸಲಾಗುತ್ತಿದೆ.

ಜೇಮ್ಸ್ ಆಂಡರ್ಸನ್ 2006 ರಲ್ಲಿ ಟೆಸ್ಟ್ ಸರಣಿಗಾಗಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಆಂಡರ್ಸನ್ ಮೊದಲ ಬಾರಿಗೆ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಂಡಾಗ, ಆಡುವ ಅವಕಾಶವೂ ಲಭಿಸಲಿಲ್ಲ. 2008 ರಲ್ಲಿ ಟೆಸ್ಟ್ ಸರಣಿಗಾಗಿ ಭಾರತದ ಎರಡನೇ ಪ್ರವಾಸವನ್ನು ಮಾಡಿದರು, 2012 ರಲ್ಲಿ ಮೂರನೇ, 2016 ರಲ್ಲಿ ನಾಲ್ಕನೇ, 2021 ರಲ್ಲಿ ಐದನೇ ಮತ್ತು 2024 ರಲ್ಲಿ ಆರನೇ ಪ್ರವಾಸ ವನ್ನು ಬೆಳೆಸಿದರು.

183 ಟೆಸ್ಟ್‌ಗಳಲ್ಲಿ 341 ಇನ್ನಿಂಗ್ಸ್‌ಗಳಲ್ಲಿ ಆಂಡರ್ಸನ್ 26.42 ಸರಾಸರಿಯಲ್ಲಿ 690 ವಿಕೆಟ್‌ಗಳನ್ನು ಪಡೆದಿದ್ದಾರೆ. ಈಗ 700 ವಿಕೆಟ್‌ಗಳನ್ನು ಪಡೆಯಲು 10 ವಿಕೆಟ್‌ಗಳ ಅಗತ್ಯವಿದೆ. ಆಂಡರ್ಸನ್ 700 ವಿಕೆಟ್ ಪಡೆದ ಮೊದಲ ವೇಗಿ ಎನಿಸಿಕೊಳ್ಳಬಹುದು.

ಟೀಮ್ ಇಂಡಿಯಾ ವಿರುದ್ಧ ಜೇಮ್ಸ್‌ ಆಡಿದ 13 ಪಂದ್ಯಗಳಲ್ಲಿ 34 ವಿಕೆಟ್‌ ಪಡೆದಿದ್ದಾರೆ. ಜೇಮ್ಸ್‌ ಆಂಡರ್ಸನ್‌ ಭಾರತದ ನೆಲದಲ್ಲಿ ಒಮ್ಮೆ ಆರು ವಿಕೆಟ್‌ ಪಡೆದು ಅಬ್ಬರಿಸಿದ್ದಾರೆ. ಜೇಮ್ಸ್‌ ಆಂಡರ್ಸನ್‌ ಅವರು ತವರಿನಲ್ಲಿ 434 ವಿಕೆಟ್‌ ಗಳನ್ನು ಕಬಳಿಸಿದ್ದರೇ, ವಿದೇಶಿ ನೆಲದಲ್ಲಿ 234 ವಿಕೆಟ್‌ ಪಡೆದಿದ್ದಾರೆ.