ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದಿನ ಪಂದ್ಯದಲ್ಲಿ ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟ ಬುಮ್ರಾ

IND vs SA 1st T20I: ಏಷ್ಯಾ ಕಪ್ ವೇಳೆ ತೊಡೆಯ ನೋವಿಗೆ ಒಳಗಾದ ಬಳಿಕ ಕ್ರಿಕೆಟ್‌ನಿಂದ ದೂರವಿದ್ದ ಹಾರ್ದಿಕ್‌ ಪಾಂಡ್ಯ ಮತ್ತೆ ತಂಡಕ್ಕೆ ಮರಳಿದ್ದಾರೆ. ಸೈಯ್ಯದ್ ಮುಷ್ತಾಕ್ ಅಹ್ಮದ್ ಟಿ20 ಟೂರ್ನಿಯಲ್ಲಿ ಬರೋಡ ಪರ 42 ಎಸೆತಗಳಲ್ಲಿ 77 ರನ್ ಬಾರಿಸುವ ಮೂಲಕ ಗಮನಸೆಳೆದಿದ್ದ ಪಾಂಡ್ಯ ಈ ಸರಣಿಯಲ್ಲೂ ಮಿಂಚುವ ನಿರೀಕ್ಷೆಯಲ್ಲಿದೆ.

Jasprit Bumrah

ಕಟಕ್‌, ಡಿ.9: ಇಂದು ಕಟಕ್‌ನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ(IND vs SA 1st T20I) ಜಸ್‌ಪ್ರೀತ್‌ ಬುಮ್ರಾ(Jasprit Bumrah) ಮಹತ್ವದ ಮೈಲುಗಲ್ಲೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ಒಂದು ವಿಕೆಟ್ ಪಡೆದರೆ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ ಕಬಳಿಸಿದ ಎರಡನೇ ಭಾರತೀಯ ವೇಗಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಬುಮ್ರಾ ಈವರೆಗೆ 80 ಟಿ20 ಪಂದ್ಯಗಳಲ್ಲಿ 18.11ರ ಸರಾಸರಿಯಲ್ಲಿ 99 ವಿಕೆಟ್‌ ಪಡೆದಿದ್ದಾರೆ. ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಕ್ರಮವಾಗಿ 234 ಮತ್ತು 149 ವಿಕೆಟ್‌ ಕಬಳಿಸಿದ್ದಾರೆ. ಏತನ್ಮಧ್ಯೆ, ಐದು ಪಂದ್ಯಗಳ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ 18 ವಿಕೆಟ್‌ ಪಡೆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಪಡೆದ ಭಾರತೀಯ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಪ್ರಸ್ತುತ ಅವರು 221 ಪಂದ್ಯಗಳಲ್ಲಿ 20.60ರ ಸರಾಸರಿಯಲ್ಲಿ 482 ವಿಕೆಟ್‌ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಬೆಸ್ಟ್‌ ಸ್ಪೆಲ್‌ 19ಕ್ಕೆ6 ಆಗಿದೆ.

ವಿಕೆಟ್‌ ಕೀಪರ್ ಸ್ಥಾನಕ್ಕೆ ಅನುಭವಿ ಸಂಜು ಸ್ಯಾಮ್ಸನ್ ಮತ್ತು ಯುವ ತಾರೆ ಜಿತೇಶ್ ಶರ್ಮಾ ಅವರ ಮಧ್ಯೆ ಪೈಪೋಟಿಯಿದೆ. ಹಾಲಿ ದೇಶಿ ಟಿ20 ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಮಿಂಚಿದ್ದಾರೆ. ಜತೆಗೆ ವಿಶ್ವಕಪ್‌ ಟೂರ್ನಿಯೂ ಸನಿಹದಲ್ಲಿ ಇರುವ ಕಾರಣ ಸಂಜುಗೆ ಅವಕಾಶ ಸಿಗುವ ಸಾಧ್ಯತೆ ಅಧಿಕ.

2024ರ ಜುಲೈನಲ್ಲಿ ನಾಯಕನಾದ ಬಳಿಕ ಸೂರ್ಯಕುಮಾರ್‌ ಬ್ಯಾಟಿಂಗ್‌ ಫಾರ್ಮ್‌ ಕುಸತ ಕಂಡಿದೆ. ಆಡಿದ 15 ಇನಿಂಗ್ಸ್‌ಗಳಲ್ಲಿ ಅವರು 15.33 ಸರಾಸರಿಯಲ್ಲಿ 184 ರನ್ ಮಾತ್ರ ಗಳಿಸಿದ್ದಾರೆ. ಕೊನೆಯ 20 ಪಂದ್ಯಗಳಲ್ಲಿ ಒಮ್ಮೆಯೂ ಅರ್ಧ ಶತಕ ಗಳಿಸಿಲ್ಲ. ಹೀಗಾಗಿ ಅವರ ಪಾಲಿಗೆ ಈ ಸರಣಿ ಮಹತ್ವದ್ದಾಗಲಿವೆ.

ಏಷ್ಯಾ ಕಪ್ ವೇಳೆ ತೊಡೆಯ ನೋವಿಗೆ ಒಳಗಾದ ಬಳಿಕ ಕ್ರಿಕೆಟ್‌ನಿಂದ ದೂರವಿದ್ದ ಹಾರ್ದಿಕ್‌ ಪಾಂಡ್ಯ ಮತ್ತೆ ತಂಡಕ್ಕೆ ಮರಳಿದ್ದಾರೆ. ಸೈಯ್ಯದ್ ಮುಷ್ತಾಕ್ ಅಹ್ಮದ್ ಟಿ20 ಟೂರ್ನಿಯಲ್ಲಿ ಬರೋಡ ಪರ 42 ಎಸೆತಗಳಲ್ಲಿ 77 ರನ್ ಬಾರಿಸುವ ಮೂಲಕ ಗಮನಸೆಳೆದಿದ್ದ ಪಾಂಡ್ಯ ಈ ಸರಣಿಯಲ್ಲೂ ಮಿಂಚುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ Jasprit Bumrah: ಪಾಪರಾಜಿಗಳ ಕಾಟಕ್ಕೆ ತಾಳ್ಮೆ ಕಳೆದುಕೊಂಡ ಬುಮ್ರಾ; ವಿಡಿಯೊ ವೈರಲ್‌

ಉಭಯ ತಂಡಗಳು

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಜೋರ್ಜಿ, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಮಾರ್ಕೊ ಜಾನ್ಸೆನ್, ಕ್ವಿಂಟನ್ ಡಿ ಕಾಕ್ (ವಿ.ಕೀ.), ಡೊನೊವನ್ ಫೆರೆರಾ (ವಿ.ಕೀ.), ಟ್ರಿಸ್ಟಾನ್ ಸ್ಟಬ್ಸ್, ಒಟ್ನೀಲ್ ಬಾರ್ಟ್‌ಮನ್, ಕೇಶವ್ ಮಹಾರಾಜ್, ಕ್ವೆನಾ ಮಫಕಾ, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ.

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ.), ಸಂಜು ಸ್ಯಾಮ್ಸನ್ (ವಿ.ಕೀ.), ಜಸ್‌ಪ್ರೀತ್‌ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್.

ಪಂದ್ಯ ಆರಂಭ; ಸಂಜೆ 7 ಕ್ಕೆ.

ನೇರ ಪ್ರಸಾರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌/ಜಿಯೋ-ಹಾಟ್‌ಸ್ಟಾರ್