Friday, 13th December 2024

Jos Buttler: ರಾಜಸ್ಥಾನ್‌ ತಂಡದಿಂದ ಕೈಬಿಟ್ಟ ಬಗ್ಗೆ ಭಾವನಾತ್ಮಕ ಪೋಸ್ಟ್‌ ಮಾಡಿದ ಬಟ್ಲರ್‌

ಲಂಡನ್‌: ಐಪಿಎಲ್ 2025ರ ಮೆಗಾ ಹರಾಜಿಗೂ(IPL 2025) ಮುನ್ನ ಎಲ್ಲ ಫ್ರಾಂಚೈಸಿಗಳು ಈಗಾಗಲೇ ತಂಡದಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ರಾಜಸ್ಥಾನ್‌ ರಾಯಲ್ಸ್‌(Rajasthan Royals) ತಂಡ ಸಂಜು ಸ್ಯಾಮ್ಸನ್(18 ಕೋಟಿ ರೂ.), ಯಶಸ್ವಿ ಜೈಸ್ವಾಲ್(18 ಕೋಟಿ ರೂ.) ರಿಯಾನ್ ಪರಾಗ್(14 ಕೋಟಿ ರೂ.), ಧ್ರುವ್‌ ಜುರೆಲ್(14‌ ಕೋಟಿ ರೂ.), ಶಿಮ್ರಾನ್ ಹೆಟ್ಮೆಯರ್(11 ಕೋಟಿ ರೂ.), ಸಂದೀಪ್ ಶರ್ಮಾ(4 ಕೋಟಿ ರೂ.) ಅವರನ್ನು ರಿಟೇನ್‌ ಮಾಡಿದೆ. ಆದರೆ ಹಾರ್ಡ್‌ ಹಿಟ್ಟರ್‌ ಜಾಸ್‌ ಬಟ್ಲರ್‌(Jos Buttler) ಅವರನ್ನು ರಿಲೀಸ್‌ ಮಾಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇದೀಗ ತಂಡದಿಂದ ಕೈ ಬಿಟ್ಟ ಬಗ್ಗೆ ಬಟ್ಲರ್‌ ಭಾವನಾತ್ಮ ಪೋಸ್ಟ್‌ ಒಂದನ್ನು ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಬಟ್ಲರ್‌, ʼಇದು ಅಂತ್ಯ ಎಂದು ತಿರುಗಿದರೆ, ರಾಜಸ್ಥಾನ್‌ ರಾಯಲ್ಸ್‌ ಮತ್ತು ಫ್ರ್ಯಾಂಚೈಸ್‌ನೊಂದಿಗಿನ 7 ಅದ್ಭುತ ಸೀಸನ್‌ಗಳಲ್ಲಿ ಆಡಿರುವ ಎಲ್ಲ ಸಹ ಆಟಗಾರರಿಗೂ ಎಲ್ಲರಿಗೂ ಧನ್ಯವಾದಗಳು. 2018ರಲ್ಲಿ ರಾಜಸ್ಥಾನ್‌ ಸೇರಿದ ನಾನು ಕಳೆದ 6 ವರ್ಷಗಳಲ್ಲಿ ಗುಲಾಬಿ ಬಣ್ಣದ ಜೆರ್ಸಿಯಲ್ಲಿ ಹಲವು ಮರೆಯಲಾಗದ ನೆನಪುಗಳಿವೆ. ನನ್ನನ್ನು ಮತ್ತು ನನ್ನ ಕುಟುಂಬವನ್ನು ತೆರೆದ ತೋಳುಗಳಿಂದ ಸ್ವಾಗತಿಸಿದ್ದಕ್ಕಾಗಿ ಧನ್ಯವಾದಗಳುʼ ಎಂದು ಬರೆದುಕೊಂಡಿದ್ದಾರೆ.

ಬಟ್ಲರ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ್‌ ರಾಯಲ್ಸ್‌, ʼಪಿಂಕ್ ಜೆರ್ಸಿ ಧರಿಸಲು ನೀವು ಶ್ರೇಷ್ಠರಲ್ಲಿ ಒಬ್ಬರಾಗುತ್ತೀರಿ. ಎಂದೆಂದಿಗೂ ನೀವು ರಾಯಲ್ಸ್‌ ಕುಟುಂಬ ಒಂದು ಭಾಗʼ ಎಂದು ಹೇಳಿದೆ. ಈ ಮೂಲಕ ಬಟ್ಲರ್‌ ಅವರನ್ನು ಹರಾಜಿನಲ್ಲಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಸುಳಿವನ್ನು ಬಟ್ಲರ್‌ಗೆ ನೀಡಿದೆ. ರಾಜಸ್ಥಾನ್‌ ತಂಡ 6 ಆಟಗಾರರನ್ನು ರಿಟೇನ್‌ ಮಾಡಿದ ಕಾರಣ ಆರ್‌ಟಿಎಂ ಕಾರ್ಡ್‌ ಬಳಸಲು ಅವಕಾಶವಿಲ್ಲ. ಹೀಗಾಗಿ ಬಟ್ಲರ್‌ ಅವರನ್ನು ಹರಾಜಿನ ಮೂಲಕವೇ ತಂಡಕ್ಕೆ ಸೇರಿಸಿಕೊಳ್ಳಬೇಕು.

ಇದನ್ನೂ ಓದಿ IPL 2025: ಆರ್‌ಸಿಬಿಯಿಂದ ಸಿರಾಜ್‌ ಕೈಬಿಟ್ಟ ಕಾರಣ ತಿಳಿಸಿದ ನಿರ್ದೇಶಕ ಬೋಬಟ್

ಜಾಸ್‌ ಬಟ್ಲರ್‌ ಅವರು 2018 ಹರಾಜಿನಲ್ಲಿ ರಾಜಸ್ಥಾನ್‌ ತಂಡ ಸೇರಿದ್ದರು. ಈ ವರೆಗೆ ಅವರು ರಾಜಸ್ಥಾನ್‌ ಪರ 3055 ರನ್‌ ಬಾರಿಸಿದ್ದಾರೆ. ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ತಂಡಕ್ಕೆ ಅಸಾಮಾನ್ಯ ಗೆಲುವು ತಂದುಕೊಟ್ಟಿದ್ದರು. ಅದರಲ್ಲೂ 2022ರ ಆವೃತ್ತಿಯೊಂದರಲ್ಲಿ 863 ರನ್‌ ಕಲೆಹಾಕಿದ್ದರು.

ಬಟ್ಲರ್‌ ಜತೆಗೆ ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ನವದೀಪ್ ಸೈನಿ, ಕುಲದೀಪ್ ಸೇನ್, ಕುನಾಲ್ ರಾಥೋಡ್, ಅವೇಶ್ ಖಾನ್, ತನುಷ್ ಕೋಟ್ಯಾನ್, ಶುಭಂ ದುಬೆ, ಅಬಿದ್ ಮುಷ್ತಾಕ್, ಜೋಸ್ ಬಟ್ಲರ್, ಟ್ರೆಂಟ್ ಬೌಲ್ಟ್, ಡೊನೊವನ್ ಫೆರೇರಾ, ರೋವ್‌ಮನ್ ಪೊವೆಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಕೇವ್‌ಹವ್ ಬರ್ಗರ್, ನಾಂದ್ರೆ ಬರ್ಗರ್ ಅವರನ್ನು ಫ್ರಾಂಚೈಸಿ ಕೈಬಿಟ್ಟಿದೆ.