Wednesday, 11th December 2024

ನಾಳೆಯಿಂದ ಕಬಡ್ಡಿ ಸೀಸನ್‌: ಬೆಂಗಳೂರು ಬುಲ್ಸ್ – ಯು ಮುಂಬಾ ನಡುವೆ ಕಾದಾಟ

Kabaddi

ಬೆಂಗಳೂರು: ಕಬಡ್ಡಿ ಕೂಟದ ಮತ್ತೊಂದು ಸೀಸನ್ ಬುಧವಾರದಿಂದ ಆರಂಭವಾಗಲಿದೆ. ಕೋವಿಡ್ ಕಾರಣದಿಂದ ಈ ಬಾರಿಯ ಸಂಪೂರ್ಣ ಪಂದ್ಯಾ ವಳಿ ಬೆಂಗಳೂರಿನಲ್ಲೇ ನಡೆಯಲಿದೆ.

ಎಲ್ಲಾ ಪಂದ್ಯಗಳು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆಕ್ಷನ್ ಸೆಂಟರ್’ನಲ್ಲಿ ನಡೆಯಲಿದೆ.

ಮೂರು ತಿಂಗಳು ನಡೆಯಲಿರುವ ಕೂಟದಲ್ಲಿ 12 ತಂಡಗಳು ಸೆಣಸಾಡಲಿದೆ. ಇದೀಗ ಮೊದಲಾರ್ಧದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸ ಲಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯ ಗಳು ನಡೆಯಲಿದೆ.

ಪ್ರತಿ ತಂಡವು 22 ಪಂದ್ಯಗಳು ಆಡಲಿದೆ. ಅಗ್ರ ಆರು ತಂಡಗಳು ಪ್ಲೇ ಆಫ್ ಪ್ರವೇಶಿ ಸಲಿದೆ. 2018ರ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಉದ್ಘಾಟನಾ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ತಂಡವು ಯು ಮುಂಬಾ ವಿರುದ್ಧ ಆಡಲಿದೆ. ಸ್ಟಾರ್ ರೈಡರ್ ಪವನ್ ಶೆರಾವತ್ ನಾಯಕರಾಗಿದ್ದು, ಡಿಫೆಂಡರ್ ಮಹೇಂದ್ರ ಸಿಂಗ್ ಉಪನಾಯಕರಾಗಿ ನೇಮಕರಾಗಿದ್ದಾರೆ.

ತಂಡ: ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬು ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯಾನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್, ಮೋಹಿತ್ ಶೆರಾವತ್, ಚಂದ್ರನ್ ರಂಜಿತ್, ಮೋರ್ ಜಿಬಿ, ದೀಪಕ್ ನರ್ವಾಲ್, ಮಯೂರ್ ಜಗನ್ನಾಥ್ ಕದಮ್, ವಿಕಾಸ್ ಭರತ್ ಹೂಡಾ, ಅಮನ್ ಅಂತಿಲ್, ನಸೀಬ್, ರೋಹಿತ್ ಕುಮಾರ್, ಅಂಕಿತ್, ರೋಹಿತ್ ಸಾಂಗ್ವಾನ್.

ಕೋಚ್: ರಣಧೀರ್ ಸಿಂಗ್ ಸೆಹ್ರಾವತ್.