Friday, 13th December 2024

ಕಾಮನ್‌ವೆಲ್‌ತ್‌ ರಾಷ್ಟ್ರಗಳಿಗೆ ಕ್ರಿಕೆಟ್ ತರಬೇತಿ ಶಿಬಿರ

ದೆಹಲಿ:
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವತಿಯಿಂದ 16 ವಯೋಮಿತಿ ಬಾಲಕರಿಗೆ ಕ್ರಿಿಕೆಟ್ ತರಬೇತಿ ಶಿಬಿರವನ್ನು ಕಾಮನ್‌ವೆಲ್‌ತ್‌ ರಾಷ್ಟ್ರಗಳ 16 ವಯೋಮಿತಿ ಬಾಲಕರಿಗಾಗಿ ಆಯೋಜಿಸಲಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನ ಎಂ. ಚಿನ್ನಸ್ವಾಾಮಿ ಕ್ರೀಡಾಂಗಣದಲ್ಲಿ ಅ. 1 ರಿಂದಲೇ ಶಿಬಿರ ಆರಂಭವಾಗಿದ್ದು, ಅ. 30 ರಂದು 16 ಕಾಮನ್‌ವೆಲ್‌ತ್‌ ರಾಷ್ಟ್ರಗಳಿಂದ 18 ಬಾಲಕರು ಹಾಗೂ 17 ಬಾಲಕಿಯರು ಸೇರಿ ಒಟ್ಟು 35 ಮಂದಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.

2018 ರ ಏಪ್ರಿಿಲ್‌ನಲ್ಲಿ ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್‌ತ್‌ ಮುಖ್ಯಸ್ಥರ ಸಭೆಯಲ್ಲಿ (ಸಿಎಚ್‌ಒಜಿಎಂ) ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಪ್ರಕಟಣೆಗೆ ಅನುಸಾರವಾಗಿ ಈ ರೀತಿಯ ಕೋಚಿಂಗ್ ಕ್ಯಾಾಂಪ್ ನಡೆಸಲಾಗುತ್ತಿಿದೆ. ಇದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಪ್ರಾಾಯೋಜಿಸುತ್ತಿಿದೆ.

ಅನುಭವಿ ಕೋಚ್‌ಗಳಿಂದ ಬಾಲಕರು ಹಾಗೂ ಬಾಲಕಿಯಿರಿಗೆ ಕ್ರಿಿಕೆಟ್ ಕೌಶಲಗಳ ಬಗ್ಗೆೆ ತರಬೇತಿ ಶಿಬಿರದಲ್ಲಿ ವೈದ್ಯಕೀಯ ಮೌಲ್ಯಮಾಪನ, ಸ್ಕ್ರೀನಿಂಗ್, ವಿಡಿಯೋ ವಿಶ್ಲೇಷಣೆ, ಕೌಶಲ್ಯ ಮೌಲ್ಯಮಾಪನ ಮತ್ತು ಇತರ ಯೋಜನೆಗಳನ್ನು ಒಳಗೊಂಡಿವೆ.