Saturday, 23rd November 2024

ರಾಯಲ್ ಚಾಲೆಂಜರ್ಸ್ – ಕಿಂಗ್ಸ್ ಇಲೆವನ್ ಮುಖಾಮುಖಿ ಇಂದು

ದುಬೈ: ಇಂದು ದುಬೈನಲ್ಲಿ ನಡೆಯುವ 6ನೇ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಇಲೆವನ್ ಮುಖಾಮುಖಿಯಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಕಂಡಿದ್ದು, ಗೆಲುವಿನ ಓಟ ಮುಂದುವರಿಸುವ ಉತ್ಸಾಹದಲ್ಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನುಭವಿಸಿದ್ದು ಜಯದ ನಿರೀಕ್ಷೆಯಲ್ಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಗೆಲುವಿನ ಹುಮ್ಮಸ್ಸಿನಲ್ಲಿದೆ. ಯಾಕೆಂದರೆ ಮೊದಲ ಪಂದ್ಯದಲ್ಲಿ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಗಳಿಸಿತ್ತು. ಅತ್ತ ಕಿಂಗ್ಸ್ ಎಲೆವೆನ್ ಪಂಜಾಬ್ ಮೊದಲ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತಿತ್ತು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಆಡಿರಲಿಲ್ಲ. ಆದರೆ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಗೇಲ್ ಅವರನ್ನು ಪಂಜಾಬ್ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಇದು ಇನ್ನಷ್ಟು ರೋಚಕ ಅನ್ನಿಸಲಿದೆ.

ಆರ್‌ಸಿಬಿಯಲ್ಲಿ ಆಡಬೇಕಿದ್ದ ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಕ್ರಿಸ್ ಮೋರಿಸ್ ಗಾಯದಿಂದಾಗಿ ಪಂಜಾಬ್‌ ವಿರುದ್ಧ ಆಡುತ್ತಿಲ್ಲ.  ಆರಂಭಿಕ ಪಂದ್ಯದಲ್ಲಿ ವೇಗಿ ಉಮೇಶ್ ಯಾದವ್ ಕಳಪೆ ಪ್ರದರ್ಶನ ನೀಡಿದ್ದರು.

ಸಂಭಾವ್ಯ ತಂಡ ಇಂತಿದೆ.

ಕಿಂಗ್ಸ್ ಎಲೆವೆನ್ ಪಂಜಾಬ್: ಕೆ.ಎಲ್.ರಾಹುಲ್ (ನಾ/ಕೀ), ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ನಿಕೋಲಸ್ ಪೂರನ್/ಕ್ರಿಸ್ ಗೇಲ್, ಸರ್ಫರಾಜ್ ಖಾನ್, ಗ್ಲೆನ್ ಮ್ಯಾಕ್ಸ್”ವೆಲ್, ಕೃಷ್ಣಪ್ಪ ಗೌತಮ್, ಕ್ರಿಸ್ ಜೋರ್ಡಾನ್/ಶೆಲ್ಡನ್ ಕಾಟ್ರೆಲ್,
ಮುಜೀಬ್ ಉರ್ ರೆಹಮಾನ್, ರವಿ ಬಿಷ್ಣೋಯಿ, ಮೊಹಮ್ಮದ್ ಶಮಿ.

ರಾಯಲ್ಸ್ ಚ್ಯಾಲೆಂಜರ್ಸ್ ಬೆಂಗಳೂರು
ಆರನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ(ನಾ), ಎಬಿಡಿ ವಿಲಿಯರ್ಸ್, ಜೋಶ್ ಫಿಲಿಪ್‍ (ಕೀ), ವಾಷಿಂಗ್ಟನ್ ಸುಂದರ್,  ಶಿವಮ್ ದುಬೆ, ನವದೀಪ್ ಸೈನಿ, ಉಮೇಶ್ ಯಾದವ್, ಡೇಲ್ ಸ್ಟೈನ್,  ಯಜುವೇಂದ್ರ ಚಹಲ್.