Wednesday, 11th December 2024

ಎರಡನೇ ಸೂಪರ್‌ ಓವರಿನಲ್ಲಿ ಗೆದ್ದು ಬೀಗಿದ ಕಿಂಗ್ಸ್ ಪಂಜಾಬ್‌

ದುಬೈ: ಮುಂಬೈ ಇಂಡಿಯನ್ಸ್-ಕಿಂಗ್ಸ್ ಎಲೆವೆನ್ ಪಂಜಾಬ್ ನಡುವೆ ನಡೆದ 36ನೇ ಪಂದ್ಯದಲ್ಲಿ ಎರಡನೇ ಸೂಪರ್‌ ಓವರಿನಲ್ಲಿ ಪಂಜಾಬ್ ತಂಡ ಗೆಲುವು ಸಾಧಿಸಿತು.

ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು ಮುಂಬೈ ಇಂಡಿಯನ್ಸ್-ಪಂಜಾಬ್ ಎಲೆವೆನ್‌ ಕಿಂಗ್ಸ್ ನಡುವೆ ನಡೆದ ಪಂದ್ಯ ಟೈ ನಲ್ಲಿ ಅಂತ್ಯಗೊಂಡಿತು. ಮೊದಲ ಸೂಪರ್ ಓವರ್ ನಲ್ಲಿ ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿ ಗೆಲ್ಲುವುದಕ್ಕೆ ಎದುರಾಳಿ ತಂಡಕ್ಕೆ 6 ರನ್ ಗಳ ಗುರಿ ನೀಡಿತ್ತು. ಆದರೆ ಈ ಬಾರಿಯೂ ಮುಂಬೈ ತಂಡ ಪಂದ್ಯವನ್ನು ಸಮಬಲ ವನ್ನಾಗಿಸಿಕೊಂಡ ಪರಿಣಾಮ ಮತ್ತೊಮ್ಮೆ ಎರಡನೇ ಸೂಪರ್ ಓವರ್ ನಡೆಸಬೇಕಾಯಿತು.

ಎರಡನೇ ಬಾರಿ ನಡೆದ ಸೂಪರ್ ಓವರ್ ನಲ್ಲಿ ಮುಂಬೈ ತಂಡದ ಪರ ಪೋಲ್ಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟ ದಲ್ಲಿ 9 ರನ್ ಗಳಿಸಿದ್ದಾಗ ಹಾರ್ದಿಕ್ ವಿಕೆಟ್ ಒಪ್ಪಿಸಿದರು. ಮುಂಬೈ ತಂಡ 11 ರನ್ ಗಳನ್ನು ಗಳಿಸಿ ಎದುರಾಳಿ ತಂಡಕ್ಕೆ 12 ರನ್ ಗಳ ಟಾರ್ಗೆಟ್ ನೀಡಿತು. ಕಿಂಗ್ಸ್ ತಂಡದ ಪರ ಮಯಾಂಕ್ ಅಗರ್ವಾಲ್ ಹಾಗೂ ಕ್ರಿಸ್ ಗೇಲ್ 15 ರನ್ ಗಳಿಸುವ ಮೂಲಕ ತಂಡ ಜಯಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಇದಕ್ಕೂ ಮುನ್ನ, ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 176 ರನ್ ಕಲೆ ಹಾಕಿತು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 53 ರನ್ ಗಳಿಸಿದರು. ಕೊನೆಯಲ್ಲಿ ಕೇವಲ 12 ಎಸೆತಗಳನ್ನು ಎದುರಿಸಿದ ಪೊಲಾರ್ಡ್‌ 34 ರನ್‌ ಬಾರಿಸಿದರೆ, ಇಷ್ಟೇ ಎಸೆತಗಳನ್ನು ಆಡಿದ ನಥನ್ ಕಲ್ಟರ್‌ನೈಲ್‌ 24 ರನ್‌ ಗಳಿಸಿದರು.

ಮುಂಬೈ ನೀಡಿದ 177 ರನ್ ಗುರಿ ಬೆನ್ನತ್ತಿದ ಪಂಜಾಬ್ ಕೂಡಾ 176 ರನ್ ಕಲೆಹಾಕಿ ಪಂದ್ಯವನ್ನು ಟೈ ಮಾಡಿಕೊಂಡಿತು.