Sunday, 1st December 2024

ಕಿವೀಸ್ ಬಿಗಿ ಬೌಲಿಂಗ್‌: ಟೀಂ ಇಂಡಿಯಾ ಪೇಚಾಟ

ಸೌತಾಂಪ್ಟ ನ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ 3ನೇ ದಿನ ಆಟ ಮೈದಾನ ತೇವಗೊಂಡಿದ್ದರಿಂದ ತಡವಾಗಿ ಆರಂಭಗೊಂಡಿದೆ.

ಸೌತಾಂಪ್ಟನ್‌ನ ಏಜಿಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ಇತ್ತೀಚಿನ ವರದಿ ಪ್ರಕಾರ, ಭೋಜನ ವಿರಾಮದ ವೇಳೆಗೆ ಏಳು ವಿಕೆಟ್‌ ನಷ್ಟಕ್ಕೆ ೨೧೧ ರನ್‌ ಗಳಿಸಿ ಶೋಚನೀಯ ಸ್ಥಿತಿಯಲ್ಲಿದೆ.

ಶನಿವಾರದ ದಿನದಾಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 146 ರನ್‌ ಗಳಿಸಿತ್ತು. ಶುಕ್ರವಾರ ಮಳೆಯಿಂದಾಗಿ ಮೊದಲ ದಿನದಾಟ ನಡೆದಿರಲಿಲ್ಲ. ಎರಡನೇ ದಿನವಾದ ಶನಿವಾರ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ರೋಹಿತ್ ಶರ್ಮಾ (34) ಶುಭಮನ್ ಗಿಲ್ (28) , ನಾಯಕ ವಿರಾಟ್‌ ಕೊಹ್ಲಿ ೪೪, ಉಪನಾಯಕ ಅಜಿಂಕ್ಯ ರಹಾನೆ ೪೯ ರನ್ ಗಳಿಸಿ ಔಟಾಗಿದ್ದು, ಭಾರೀ ಮೊತ್ತ ಪೇರಿಸುವ ಪ್ರಯತ್ನಕ್ಕೆ ತಡೆ ಉಂಟಾಯಿತು.

ಸದ್ಯ ಕ್ರೀಸ್‌ನಲ್ಲಿ ಆಲ್ರೌಂಡರ್‌ ರವೀಂದ್ರ ಜಡೇಜಾ ಹಾಗೂ ಬಾಲಂಗೋಚಿ ಇಶಾಂತ್‌ ಶರ್ಮಾ ವಿಕೆಟ್‌ ಕಾಯ್ದುಕೊಂಡಿದ್ದಾರೆ.