Wednesday, 11th December 2024

ಕೆಕೆಆರ್ – ಸನ್‌ರೈಸರ್ಸ್‌ : ಇಂದು ಸ್ಪಿನ್ನರುಗಳ ಆಟ

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ 8 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಆಡಲಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಸೋತಿರುವುದರಿಂದ ಇಂದಿನ ಪಂದ್ಯ ತುಂಬಾ ಕುತೂಹಲಕಾರಿಯಾಗಿದೆ.

ಹಿಂದಿನ ಅಂಕಿ-ಅಂಶಗಳ ಪ್ರಕಾರ ಕೊಂಚ ಕೋಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠವಾಗಿದೆ. ಆಡಿರುವ 17 ಪಂದ್ಯಗಳಲ್ಲಿ 10ರಲ್ಲಿ ಕೆಕೆಆರ್ ಗೆದ್ದಿದೆ. ಈ ಸಾರಿ ಸನ್ ರೈಸರ್ಸ್ ಹೈದರಾಬಾದ್‌ನಲ್ಲೂ ಒಳ್ಳೆಯ ಆಟಗಾರರು ಇರುವುದರಿಂದ ಜಿದ್ದಾಜಿದ್ದಿಯ ಕದನ ನಿರೀಕ್ಷಿತ.

ಅಬುಧಾಬಿ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕಾರಿಯಾಗಿದೆ. ಹೀಗಾಗಿ ಎರಡೂ ತಂಡಗಳ ಸ್ಪಿನ್ನರ್‌ಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. 

ಸಂಭಾವ್ಯ ತಂಡ ಇಂತಿದೆ.

ಕೆಕೆಆರ್‌ ಸಂಭಾವ್ಯ: ಸುನಿಲ್ ನರೀನ್, ಶುಬ್ಮನ್ ಗಿಲ್, ದಿನೇಶ್ ಕಾರ್ತಿಕ್ (ವಿ.ಕೆ, ನಾ), ನಿತೀಶ್ ರಾಣಾ, ಇಯಾನ್ ಮಾರ್ಗನ್, ಆಯಂಡ್ರೆ ರಸ್ಸೆಲ್, ನಿಖಿಲ್ ನಾಯಕ್, ಪ್ಯಾಟ್ ಕಮ್ಮಿನ್ಸ್, ಶಿವಮಾನ್ ಮಾವಿ, ಸಂದೀಪ್ ವಾರಿಯರ್, ಕುಲದೀಪ್ ಯಾದವ್.

ಎಸ್‌ಆರ್‌ಎಚ್ ಸಂಭಾವ್ಯ: ಜಾನಿ ಬೈರ್‌ಸ್ಟೋವ್ (ವಿಕೆ), ಡೇವಿಡ್ ವಾರ್ನರ್ (ನಾ), ಕೇನ್ ವಿಲಿಯಮ್ಸನ್/ಮೊಹಮ್ಮದ್ ನಬಿ/ಫ್ಯಾಬೀನ್ ಅಲೆನ್, ಮನೀಶ್ ಪಾಂಡೆ, ವಿಜಯ್ ಶಂಕರ್, ಅಭಿಷೇಕ್ ಶರ್ಮಾ, ಪ್ರಿಯಮ್ ಗರ್ಗ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಟಿ ನಟರಾಜನ್.