Saturday, 14th December 2024

ಸ್ಮಿತ್ ಪಡೆಗೆ ಕೋಲ್ಕತಾ ನೈಟ್ ರೈಡರ‍್ಸ್ ಸವಾಲು

ದುಬೈ: ದುಬೈಯ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡಲಿವೆ.

ಈ ಬಾರಿಯ ಸೀಸನ್‌ನಲ್ಲಿ ಆರ್‌ಆರ್ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಆವರಿಸಿಕೊಂಡಿದೆ. ಕೆಕೆಆರ್‌ ತಂಡ ಎರಡರಲ್ಲಿ ಒಂದು ಗೆಲುವು ಕಂಡಿದೆ. ಸದ್ಯದ ಪಾಯಿಂಟ್ ಟೇಬಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ನಂ.1 ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ 7ನೇ ಸ್ಥಾನದಲ್ಲಿದೆ.

ಎರಡೂ ತಂಡಗಳು ಸಮಬಲ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್‌ನಲ್ಲಿ ಈ ಹಿಂದೆ ಒಟ್ಟಿಗೆ 21 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 10 ಪಂದ್ಯಗಳನ್ನು ಕೆಕೆಆರ್ ಗೆದ್ದಿದ್ದರೆ. ಆರ್‌ಆರ್ 10 ಪಂದ್ಯಗಳನ್ನು ಜಯಿಸಿದೆ. ಇನ್ನೊಂದು ಪಂದ್ಯ ರದ್ದಾಗಿತ್ತು.

ಸಂಭಾವ್ಯ ತಂಡ ಇಂತಿದೆ.

ಕೋಲ್ಕತಾ ನೈಟ್ ರೈಡರ‍್ಸ್: ಶುಬ್ಮನ್ ಗಿಲ್, ಸುನೀಲ್ ನಾರಾಯಣ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ನಾ/ಕೀ), ಇಯಾನ್ ಮಾರ್ಗನ್, ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಶಿವಂ ಮವಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಕಮಲೇಶ್ ನಾಗರಕೋಟಿ.

ರಾಜಸ್ಥಾನ್ ರಾಯಲ್ಸ್: ಸ್ಟಿವ್ ಸ್ಮಿತ್(ನಾ), ಜೋಸ್ ಬಟ್ಲರ್‌(ಕೀ), ಸಂಜೂ ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ಟೆವಾಟಿಯಾ, ಟಾಮ್ ಕುರ‍್ರನ್, ಜೋಫ್ರಾ ಆರ್ಚರ್‌, ಶ್ರೇಯಸ್ ಗೋಪಾಲ್, ಅಂಕಿತ್ ರಾಜಪೂತ್, ಜಯದೇವ್ ಉನಾದ್ಕತ್