Friday, 13th December 2024

ಕೋಲ್ಕತಾಗೆ ಸಿಹಿ, ಕೈಕೊಟ್ಟ ರಾಜಸ್ಥಾನ ಬ್ಯಾಟಿಂಗ್

ದುಬೈ: ಕೋಲ್ಕತಾ ನೈಟ್ ರೈಡರ‍್ಸ್ ತಂಡ ರಾಜಸ್ಥಾನಕ್ಕೆ ಪ್ರಸಕ್ತ ಸಾಲಿನ ಐಪಿಎಲ್’ನಲ್ಲಿ ರಾಜಸ್ಥಾನಕ್ಕೆ ಮೊದಲ ಸೋಲಿನ ಕಹಿ ಉಣಿಸಿದೆ.

ಈ ಗೆಲುವಿನ ಮೂಲಕ ದಿನೇಶ್ ಕಾರ್ತಿಕ್ ಪಡೆ ನಾಲ್ಕು ಅಂಕಗಳೊAದಿಗೆ ಅಗ್ರ ನಾಲ್ಕರಲ್ಲಿ ಎರಡನೇ ಸ್ಥಾನಕ್ಕೇರಿದೆ. ರಾಜಸ್ತಾನ್ ಈಗಾಗಲೇ ಅಗ್ರಸ್ಥಾನದಲ್ಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡ ಮೂರನೇ ಹಾಗೂ ನಾಲ್ಕನೇ ಸ್ಥಾನವನ್ನು ಅಲಂಕರಿಸಿವೆ. ಒಂದು ಗೆಲುವಿನೊಂದಿಗೆ ಅಭಿಮಾನಿಗಳ ಫೇವರೇಟ್ ಚೆನ್ನೆöÊ ಸೂಪರ್ ಕಿಂಗ್ಸ್ ಕೊನೆಯ ಲ್ಲಿದೆ.

ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಜಸ್ತಾನ್ ತಂಡ ಟಾಸ್ ಗೆದ್ದರೂ, ಫೀಲ್ಡಿಂಗ್ ಆಯ್ದುಕೊಂಡಿತು. ಕೋಲ್ಕತಾಗೆ ಉತ್ತಮ ಆರಂಭ ಸಿಗದಿದ್ದರೂ, ಆರಂಭಿಕ ಶುಬ್ಮನ್ ಗಿಲ್, ಆಲ್ರೌಂಡರ್ ಆಂಡ್ರೆ ರಸೆಲ್, ನಿತೀಶ್ ರಾಣ ಹಾಗೂ ಇಯಾನ್ ಮಾರ್ಗನ್ ತಮ್ಮ ಅತ್ಯಮೂಲ್ಯ ಕೊಡುಗೆ ನೀಡಿದರು. ತಂಡದ ಇನ್ನಿಂಗ್ಸ್’ನಲ್ಲಿ ಒಂದೂ ಅರ್ಧಶತಕ ಬರಲಿಲ್ಲ. ವೇಗಿ ಜೋಫ್ರಾ ಆರ್ಚರ್ ಕೇವಲ ೧೮ ರನ್ ನೀಡಿ ಎರಡು ವಿಕೆಟ್ ಕಿತ್ತು ನಿಯಂತ್ರಿತ ಬೌಲಿಂಗ್ ನಡೆಸಿದರು.

ಜವಾಬು ನೀಡಲಾರಂಭಿಸಿದ ರಾಜಸ್ತಾನ್ ತಂಡದಿAದಲೂ ಪೆವಿಲಿಯನ್ ಪೆರೇಡ್ ನಡೆಸಿದರು. ಕೆಳಕ್ರಮಾಂಕದ ಟಾಮ್ ಕರ‍್ರನ್ ಅರ್ಧಶತಕ ಸಿಡಿಸಿದರು. ಏಳು ಮಂದಿ ಸಿಂಗಲ್ ಡಿಜಿಟ್ ಕೊಡುಗೆ ನೀಡಿದರು. ಶಿವಮ್ ಮವಿ, ಕಮಲೇಶ್ ನಾಗರಕೋಟಿ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಕಿತ್ತು, ಚೇಸಿಂಗಿಗೆ ಬಲವಾದ ಪೆಟ್ಟು ನೀಡಿದರು.

ಸ್ಕೋರ್ ವಿವರ
ಕೋಲ್ಕತಾ ನೈಟ್ ರೈಡರ‍್ಸ್ 174/6
ಶುಬ್ಮನ್ ಗಿಲ್ 47, ಆಂಡ್ರೆ ರಸೆಲ್ 24, ನಿತೀಶ್ ರಾಣಾ 22, ಮಾರ್ಗನ್ 34 ಅಜೇಯ.
ಬೌಲಿಂಗ್: ಜೋಫ್ರಾ ಆರ್ಚರ್ 18/2, ರಾಜಪೂತ್ 39/1, ಜಯದೇವ್ ಉನಾದ್ಕತ್ 14/1, ಟಾಮ್ ಕರ‍್ರನ್ 37/1, ರಾಹುಲ್ ಟೆವಾಟಿಯಾ 6/1.
ರಾಜಸ್ತಾನ್ ರಾಯಲ್ಸ್ 137/9
ಜೋಸ್ ಬಟ್ಲರ್ 21, ಟಾಮ್ ಕರ‍್ರನ್ 54 ಅಜೇಯ
ಬೌಲಿಂಗ್: ಶಿವಂ ಮವಿ 20/2, ಕಮಲೇಶ್ ನಾಗರಕೋಟಿ 13/2, ವರುಣ್ ಚಕ್ರವರ್ತಿ 25/2, ಸುನೀಲ್ 40/1, ಪ್ಯಾಟ್ ಕಮಿನ್ಸ್ 13/1, ಕುಲದೀಪ್ ಯಾದವ್ 20/1.
ಪಂದ್ಯಶ್ರೇಷ್ಠ: ಶಿವಂ ಮವಿ.