Friday, 13th December 2024

ಟಾಸ್ ಗೆದ್ದ ಕೋಲ್ಕತ್ತಾ ಬ್ಯಾಟಿಂಗ್ ಆಯ್ಕೆ

ಅಬುಧಾಬಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಶನಿವಾರ ಅಬುಧಾಬಿ ಅಂಗಳದಲ್ಲಿ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯ ಮಾಡಿದೆ.

ಸತತ ನಾಲ್ಕು ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಗೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯವಿದೆ. ಬಹುತೇಕ ಪ್ಲೇ ಆಫ್ ಹಾದಿ ಮುಚ್ಚಿದ್ದರು. ಪಂಜಾಬ್‌ಗ ಈ ಪಂದ್ಯ ಮಹತ್ವದ್ದಾಗಿದೆ. ಇಲ್ಲಿಯೂ ಪಂಜಾಬ್‌ ಸೋತಲ್ಲಿ ಐಪಿಎಲ್‌ ಕೂಟದಿಂದ ಹೊರನಡೆದ ಮೊದಲ ತಂಡವಾಗಲಿದೆ.

ಕಳೆದ ಚೆನ್ನೈ ವಿರುದ್ಧದ ಅಲ್ಪಮೊತ್ತದ ಪಂದ್ಯವನ್ನು ಹಿಡಿದು ನಿಲ್ಲಿಸಿದ ಕೆಕೆಆರ್‌ಗೆ ತನ್ನ ತಂಡದ ಬೌಲರ್‌ಗಳ ಮೇಲೆ ಆತ್ಮ ವಿಶ್ವಾಸ ಮೂಡಿದೆ. ಮೊದಲ ಬಾರಿ ಆರಂಭಿಕನಾಗಿ ಆಡಲಿ ಳಿದ ರಾಹುಲ್‌ ತ್ರಿಪಾಠಿ ಉತ್ತಮವಾಗಿ ಆಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ಕಮಲೇಶ್‌ ನಾಗರ್‌ಕೋಟಿ, ವರುಣ್‌ ಚರ್ಕವರ್ತಿ ಉತ್ತಮ ಲಯದಲ್ಲಿ ದ್ದಾರೆ.

ತಂಡಗಳು: ಕೆಕೆಆರ್: ರಾಹುಲ್ ತ್ರಿಪಾಠಿ, ಶುಬ್ಮನ್ ಗಿಲ್, ನಿತೀಶ್ ರಾಣಾ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್(ನಾ/ಕೀ)) , ಆಂಡ್ರೆ ರಸ್ಸೆಲ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ಪ್ರಸಿದ್ದ ಕೃಷ್ಣ, ವರುಣ್ ಚಕ್ರವರ್ತಿ.

ಪಂಜಾಬ್: ಕೆ.ಎಲ್.ರಾಹುಲ್ (ನಾ), ಮಾಯಾಂಕ್ ಅಗರ್ವಾಲ್, ಮಂದೀಪ್ ಸಿಂಗ್, ನಿಕೋಲಸ್ ಪೂರನ್, ಸಿಮ್ರಾನ್ ಸಿಂಗ್ (ವಿ.ಕೀ), ಗ್ಲೆನ್ ಮ್ಯಾಕ್ಸ್‌ವೆಲ್, ಮುಜೀಬ್ ಉರ್ ರಹಮಾನ್, ಕ್ರಿಸ್ ಜೋರ್ಡಾನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್.