ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KL Rahul: ರನ್‌ ದಾಖಲೆಯ ಸನಿಹ ಕನ್ನಡಿಗ ಕೆ.ಎಲ್ ರಾಹುಲ್

ENG vs IND: ರಾಹುಲ್‌ಗೆ ಈ ಸರಣಿಯಲ್ಲಿ ತಮ್ಮ ವೈಯಕ್ತಿಕ ದಾಖಲೆಯನ್ನು ತಿದ್ದಿ ಬರೆಯುವ ಅವಕಾಶ ಕೂಡ ಇದೆ. ರಾಹುಲ್‌ಗೆ ಕೇವಲ 19 ರನ್‌ ಬಾರಿಸಿದರೆ ಟೆಸ್ಟ್ ಸರಣಿಯೊಂದರಲ್ಲಿಅತ್ಯಧಿಕ ರನ್ ಗಳಿಸಿದ ಸಾಧನೆಗೈಯಲಿದ್ದಾರೆ. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ತವರಿನ ಸರಣಿಯಲ್ಲಿ 393 ರನ್ ಗಳಿಸಿದ್ದು ಸದ್ಯ ದಾಖಲೆ.

ಮ್ಯಾಚೆಂಸ್ಟರ್‌: ಇಂಗ್ಲೆಂಡ್‌(ENG vs IND) ವಿರುದ್ಧದ ನಾಲ್ಕನೇ ಟೆಸ್ಟ್‌(Manchester Test) ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ನೂತನ ಮೈಲುಗಲ್ಲೊಂದನ್ನು ನೆಡುವ ಹಾದಿಯಲ್ಲಿದ್ದಾರೆ. ಭಾರತ ಪರ 9000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರ್ತಿಗೊಳಿಸಲು ಕೇವಲ 60 ರನ್‌ಗಳ ಅಗತ್ಯವಿದೆ. ಇಲ್ಲಿಯವರೆಗೆ, ರಾಹುಲ್ 218 ಪಂದ್ಯಗಳಿಂದ 75.01 ರ ಸರಾಸರಿಯಲ್ಲಿ 8,940 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 58 ಅರ್ಧಶತಕ ಒಳಗೊಂಡಿದೆ.

ರಾಹುಲ್‌ಗೆ ಈ ಸರಣಿಯಲ್ಲಿ ತಮ್ಮ ವೈಯಕ್ತಿಕ ದಾಖಲೆಯನ್ನು ತಿದ್ದಿ ಬರೆಯುವ ಅವಕಾಶ ಕೂಡ ಇದೆ. ರಾಹುಲ್‌ಗೆ ಕೇವಲ 19 ರನ್‌ ಬಾರಿಸಿದರೆ ಟೆಸ್ಟ್ ಸರಣಿಯೊಂದರಲ್ಲಿಅತ್ಯಧಿಕ ರನ್ ಗಳಿಸಿದ ಸಾಧನೆಗೈಯಲಿದ್ದಾರೆ. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ತವರಿನ ಸರಣಿಯಲ್ಲಿ 393 ರನ್ ಗಳಿಸಿದ್ದು ಸದ್ಯ ದಾಖಲೆ. ಪ್ರಸ್ತುತ ಇಂಗ್ಲೆಂಡ್‌ ಸರಣಿಯಲ್ಲಿ ರಾಹುಲ್‌ ಆಡಿ ಮೂರು ಪಂದ್ಯಗಳಲ್ಲಿ 42, 137, 2, 55, 100 ಮತ್ತು 39 ರನ್‌ಗಳೊಂದಿಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಒಂದೇ ಟೆಸ್ಟ್ ಸರಣಿಯಲ್ಲಿ ರಾಹುಲ್ ಗಳಿಸಿದ ಅತಿ ಹೆಚ್ಚು ರನ್‌

2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ; 4 ಪಂದ್ಯಗಳಿಂದ 393 ರನ್‌ಗಳು

2025ರಲ್ಲಿ ಇಂಗ್ಲೆಂಡ್‌ ವಿರುದ್ಧ; 3 ಪಂದ್ಯಗಳಿಂದ 375* ರನ್‌ಗಳು

2021-22ರಲ್ಲಿ ಇಂಗ್ಲೆಂಡ್‌ ವಿರುದ್ಧ; 4 ಪಂದ್ಯಗಳಿಂದ 315 ರನ್‌ಗಳು

2018ರಲ್ಲಿ ಇಂಗ್ಲೆಂಡ್‌ ವಿರುದ್ಧ; 5 ಪಂದ್ಯಗಳಿಂದ 299 ರನ್‌ಗಳು

2024-25ರಲ್ಲಿ ಆಸ್ಟ್ರೇಲಿಯಾ ವಿರುದ್ಧ; 5 ಪಂದ್ಯಗಳಿಂದ 276 ರನ್‌ಗಳು

ಇದನ್ನೂ ಓದಿ ENG vs IND: ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ 19 ವರ್ಷದ ಏಷ್ಯನ್ ದಾಖಲೆ ಮೇಲೆ ಕಣ್ಣಿಟ್ಟ ಶುಭ್‌ಮನ್ ಗಿಲ್

ಕಳೆದ 89 ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡವು ಓಲ್ಡ್ ಟ್ರಾಫರ್ಡ್‌ನಲ್ಲಿ ಒಮ್ಮೆಯೂ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಮೊದಲ ಬಾರಿಗೆ 1936 ರಲ್ಲಿ ಈ ಸ್ಥಳದಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಆಡಿತ್ತು. ಆ ಪಂದ್ಯ ಡ್ರಾ ಗೊಂಡಿತ್ತು. ಅಂದಿನಿಂದ ಇಂದಿನ ವರೆಗೆ ಭಾರತ ಒಟ್ಟು 9 ಪಂದ್ಯಗಳನ್ನು ಆಡಿದೆ. ಈ ಪೈಕಿ ನಾಲ್ಕು ಸೋಲು ಮತ್ತು ಐದು ಡ್ರಾ ಸಾಧಿಸಿದೆ.