Friday, 13th December 2024

ಆಸೀಸ್‌ ಸರಣಿಯಿಂದ ಕನ್ನಡಿಗ ಕೆ.ಎಲ್.ರಾಹುಲ್ ಔಟ್‌

ಸಿಡ್ನಿ: ಮೂರನೇ ಟೆಸ್ಟ್ ಪಂದ್ಯಕ್ಕೆ ಅಣಿಯಾಗುತ್ತಿರುವ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಕನ್ನಡಿಗ ಕೆ ಎಲ್ ರಾಹುಲ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.

ಅಭ್ಯಾಸ ನಡೆಸುವಾಗ ಎಡ ಮಣಿಕಟ್ಟು ಉಳುಕಿದ ಕಾರಣ ರಾಹುಲ್ ಸರಣಿಯಿಂದಲೇ ಹೊರ ಬೀಳಬೇಕಾಗಿದೆ. ರಾಹುಲ್ ಭಾರತದ ವಿಮಾನ ಏರಲಿದ್ದು, ಬೆಂಗಳೂರಿನ ಎನ್ ಸಿಎ ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

ಸರಣಿಯಿಂದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್ ಹೊರಬಿದ್ದಿದ್ದು, ಈಗ ಮತ್ತೊಂದು ಆಘಾತ ಎದು ರಾಗಿದೆ. ಕೆ ಎಲ್ ರಾಹುಲ್ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಪಡೆಯದೇ ಇದ್ದರೂ ಮೂರನೇ ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದರು. ಮೂರನೇ ಟೆಸ್ಟ್ ಪಂದ್ಯ ಜ.7ರಿಂದ ಸಿಡ್ನಿಯಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ಆಸೀಸ್ ಗೆದ್ದರೆ ಎರಡನೇ ಪಂದ್ಯದಲ್ಲಿ ಭಾರತ ಜಯಭೇರಿ ಗಳಿಸಿತ್ತು.