Monday, 16th September 2024

ಟೆಸ್ಟ್ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾದ ಕೀಪರ್ ಹೆನ್ರಿಚ್ ಕ್ಲಾಸೆನ್ ನಿವೃತ್ತಿ

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಇತ್ತೀಚೆಗೆ, ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದ್ದರು. ಇದೀಗ ಕ್ಲಾಸೆನ್ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಆದರೆ, ಕ್ಲಾಸೆನ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ನಾನು ಕೆಂಪು ಚೆಂಡು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಟೆಸ್ಟ್ ನನ್ನ ನೆಚ್ಚಿನ ಕ್ರಿಕೆಟ್ ಆಗಿದೆ. ಮೈದಾನದ ಒಳಗೆ ಮತ್ತು ಹೊರಗೆ ನಾನು ಎದುರಿಸಿದ ಕೆಲವು ಸನ್ನಿವೇಶಗಳು ನನ್ನನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಇದೊಂದು ಅದ್ಭುತ ಪ್ರಯಾಣವಾಗಿದ್ದು, ನಾನು ನನ್ನ ದೇಶವನ್ನು ಪ್ರತಿನಿಧಿಸು ತ್ತಿರುವುದು ಸಂತಸ ತಂದಿದೆ ಎಂದು ಬರೆದಿದ್ದಾರೆ. ರೆಡ್ ಬಾಲ್ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ಕ್ಲಾಸೆನ್ 2019 ರಲ್ಲಿ ಚೊಚ್ಚಲ ಮ್ಯಾಚ್ ಆಡಿದ್ದಾರೆ. ಭಾರತದ ವಿರುದ್ಧ ಈ ಮಾದರಿಯಲ್ಲಿ ಚೊಚ್ಚಲ ಪಂದ್ಯವಾಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ.ಅವರ ವೃತ್ತಿಜೀವನ ಕೇವಲ 4 ಪಂದ್ಯಗಳಿಗೆ ಸೀಮಿತವಾಗಿತ್ತು.ಅವರು 4 ಪಂದ್ಯಗಳಲ್ಲಿ 104 ರನ್ ಗಳಿಸಿದರು. ಈ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಯಾವುದೇ ಶತಕ ಅಥವಾ ಅರ್ಧಶತಕ ಸಿಡಿಯಲಿಲ್ಲ.

Leave a Reply

Your email address will not be published. Required fields are marked *