Sunday, 6th October 2024

ಟಿ-20 ರ‍್ಯಾಂಕಿಂಗ್: ಕೊಹ್ಲಿ, ರೋಹಿತ್‌’ಗೆ ಬಡ್ತಿ, ಕುಸಿದ ರಾಹುಲ್‌

ದುಬೈ: ಐಸಿಸಿ, ಅಂತರಾಷ್ಟ್ರೀಯ ಟಿ-20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಉಪನಾಯಕ ರೋಹಿತ್ ಶರ್ಮಾ 14ನೇ ಸ್ಥಾನಕ್ಕೇರಿದ್ದಾರೆ.

ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ನಡೆದ ಕೊನೆಯ ಟಿ-20 ಪಂದ್ಯದಲ್ಲಿ 34 ಎಸೆತಗಳಿಗೆ 64 ರನ್ ಗಳಿಸಿದ್ದರು. ನಾಯಕ ಕೊಹ್ಲಿ ಅತಿ ಹೆಚ್ಚು 231 ರನ್ ಗಳಿಸಿದ್ದರು. ಕೊಹ್ಲಿ 3 ಅರ್ಧಶತಕ ಗಳಿಸಿದ್ದರು.

ವಿಕೆಟ್ ‌ಕೀಪರ್, ಬ್ಯಾಟ್ಸ್ಮನ್ ರಾಹುಲ್ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲನ್ 892 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 830 ಅಂಕದೊಂದಿಗೆ ಆರೋನ್ ಫಿಂಚ್ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ನಾಯಕ ಬಾಬರ್ ಅಜಮ್ 801 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily