Wednesday, 9th October 2024

ಕೃನಾಲ್’ಗೆ ಕರೋನಾ: ಎರಡನೇ ಚುಟುಕು ಪಂದ್ಯ ನಾಳೆಗೆ ಮುಂದೂಡಿಕೆ

ಕೋಲಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟ್ವೆಂಟಿ – 20 ಅಂತಾರಾಷ್ಟ್ರೀಯ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಟೀಂ ಇಂಡಿಯಾದ ಆಲ್ರೌಂಡರ್‌ ಕೃನಾಲ್ ಪಾಂಡ್ಯ ಕರೋನಾ ಪಾಸಿಟಿವ್ ಆಗಿರುವುದು ಇದಕ್ಕೆ ಕಾರಣ ವಾಗಿದೆ. ಮಂಗಳವಾರ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ಕೃನಾಲ್ ರನ್ನು ತಂಡದಿಂದ ಪ್ರತ್ಯೇಕವಾಗಿರಿಸ ಲಾಗಿದೆ. ಎಂಟು ಆಟಗಾರರು ಕೃನಾಲ್ ನಿಕಟ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅವರನ್ನು ಹೊಟೇಲ್ ಕೋಣೆ ಯಲ್ಲಿ ಪ್ರತ್ಯೇಕಿಸಲಾಗಿದೆ.

ಎಲ್ಲರ ಪರೀಕ್ಷಾ ವರದಿ ನೆಗೆಟಿವ್ ಬಂದಲ್ಲಿ ನಾಳೆ ಪಂದ್ಯ ನಡೆಯಲಿದೆ. ಮಂಗಳವಾರ ಪಂದ್ಯಕ್ಕೆ ಮುಂಚಿತ ವಾಗಿ ನಡೆಸಿದ ರ್ಯಾಪಿಡ್ ಪರೀಕ್ಷೆಯಲ್ಲಿ ಪಾಂಡ್ಯ ವರದಿ ಪಾಸಿಟಿವ್ ಬಂದಿತ್ತು ಎಂದು ಬಿಸಿಸಿಐ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ಭಾರತ, ಶ್ರೀಲಂಕಾ ವಿರುದ್ಧ ಮೊದಲ ಪಂದ್ಯವನ್ನು 38 ರನ್‌ಗಳಿಂದ ಗೆದ್ದುಕೊಂಡಿತ್ತು. ಎರಡನೇ ಪಂದ್ಯ ಮಂಗಳವಾರ ನಡೆಯಬೇಕಿತ್ತು. ಕೃನಾಲ್ ಮೊದಲ ಆಟದಲ್ಲಿ ಮೂರು ರನ್ ಗಳಿಸಿ, ಎರಡು ಓವರ್‌ಗಳಲ್ಲಿ ಒಂದು ವಿಕೆಟ್ ಪಡೆದಿದ್ದರು.