ಲಖನೌ, ಮಾ.12: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ (Kuldeep yadav) ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಾರ್ಚ್ 14ರಂದು ಉತ್ತರಾಖಂಡದ ಮಸ್ಸೂರಿಯ ರೆಸಾರ್ಟ್ನಲ್ಲಿ(kuldeep yadav marriage) ಬಾಲ್ಯದ ಗೆಳತಿ ವಂಶಿಕಾ(Vanshika) ಅವರನ್ನು ವರಿಸಲಿದ್ದಾರೆ. ಮಾರ್ಚ್ 13ರಂದು ಹಳದಿ ಮತ್ತು ಮೆಹಂದಿ ಸಮಾರಂಭ ನಡೆಯಲಿದೆ.
ಮಾರ್ಚ್ 17ರಂದು ಲಖನೌದಲ್ಲಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ಜೂನ್ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಕಳೆದ ವರ್ಷ ನವೆಂಬರ್ನಲ್ಲೇ ಅವರ ವಿವಾಹ ನಿಗದಿಯಾಗಿತ್ತು. ಆದರೆ ಕುಲದೀಪ್ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾಹವನ್ನು ಮುಂದೂಡಲಾಗಿತ್ತು.
ಈ ಬಾರಿಯ ವಿಶ್ವಕಪ್ನಲ್ಲಿ ಕುಲ್‌ದೀಪ್‌ಗೆ ಕೇವಲ ಒಂದು ಪಂದ್ಯವನ್ನಾಡುವ ಅವಕಾಶ ಮಾತ್ರ ಲಭಿಸಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿದ್ದ ಅವರು 14 ರನ್ಗಳಿಗೆ 1 ವಿಕೆಟ್ ಕಬಳಿಸಿದ್ದರು.
ರಾಹುಲ್ ದ್ರಾವಿಡ್‌ಗೆ ಜೀವಮಾನ ಸಾಧನೆ, ಶುಭಮನ್ ಗಿಲ್‌ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ
ವರದಿಗಳ ಪ್ರಕಾರ, ವಂಶಿಕಾ ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಕೆಲಸ ಮಾಡುತ್ತಾರೆ. ಅವರು ಮೂಲತಃ ಉತ್ತರ ಪ್ರದೇಶದ ಕಾನ್ಪುರದವರು. ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ತಂದೆ ಯೋಗೇಶ್ ಸಿಂಗ್ ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಕೆಲಸ ಮಾಡುತ್ತಾರೆ. ಕುಲದೀಪ್ ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಸಂಬಂಧಿಸಿದ ಛಾಯಾಚಿತ್ರಗಳಲ್ಲಿ ಅವರು ವಿರಳವಾಗಿ ಕಾಣಿಸಿಕೊಳ್ಳುತ್ತಾರೆ.
ಕುಲ್ದೀಪ್ ಮತ್ತು ವಂಶಿಕಾ ಅವರ ಆಳವಾದ ಸ್ನೇಹವು ಅವರ ಬಾಲ್ಯದಿಂದಲೇ ಇತ್ತು. ಅವರ ಸ್ನೇಹವು ಪ್ರೀತಿಯಾಗಿ ಅರಳಿತು, ಮತ್ತು ಅವರು ಅಂತಿಮವಾಗಿ ತಮ್ಮ ಹೆತ್ತವರ ಆಶೀರ್ವಾದದೊಂದಿಗೆ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಲು ನಿರ್ಧರಿಸಿದರು.