ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LA 2028 Olympics: ಒಲಿಂಪಿಕ್ಸ್‌ ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

ಜುಲೈ 20ರಂದು ಮಹಿಳೆಯರ ಮತ್ತು 29ರಂದು ಪುರುಷರ ಪದಕ ಸುತ್ತಿನ (ಫೈನಲ್‌) ಪಂದ್ಯಗಳು ನಡೆಯಲಿವೆ. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಆರು ತಂಡಗಳು ಪೈಪೋಟಿ ನಡೆಸಲಿವೆ. ಪ್ರತಿ ತಂಡದಲ್ಲಿ 15 ಸದಸ್ಯರಿದ್ದು, ಒಟ್ಟು 180 ಆಟಗಾರರು ಕಣಕ್ಕಿಳಿಯಲಿದ್ದಾರೆ.

ಲಾಸ್‌ ಏಂಜಲೀಸ್‌: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ 2028 ರಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟವು(LA 2028 Olympics) ಜುಲೈ 14, 2028 ರಿಂದ ಜುಲೈ 30 ರವರೆಗೆ ನಡೆಯಲಿದೆ. ಈ ಮಹಾ ಕ್ರೀಡಾಕೂಟವು ಒಟ್ಟು 36 ವಿವಿಧ ಕ್ರೀಡೆಗಳೊಂದಿಗೆ ಹಿಂದೆಂದಿಗಿಂತಲೂ ಅತಿದೊಡ್ಡ ಸ್ಪರ್ಧೆಯಾಗಿ ರೂಪುಗೊಳ್ಳಲಿದೆ. ಕ್ರಿಕೆಟ್‌(Cricket at LA Olympics) ಪಂದ್ಯಾವಳಿ ಜುಲೈ 12ರಿಂದ ಜುಲೈ 29ರತನಕ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ.

128 ವರ್ಷಗಳ ನಂತರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಇದಕ್ಕಾಗಿ ಏಂಜಲೀಸ್‌ನಿಂದ ಸುಮಾರು 50 ಕಿಮೀ ದೂರದಲ್ಲಿರುವ ಪೊಮೆನಾ ನಗರದ ಫೇರ್‌ಗ್ರೌಂಡ್ಸ್ ಕ್ರೀಡಾಂಗಣ ಸಜ್ಜಾಗಲಿದೆ.

ಜುಲೈ 20ರಂದು ಮಹಿಳೆಯರ ಮತ್ತು 29ರಂದು ಪುರುಷರ ಪದಕ ಸುತ್ತಿನ (ಫೈನಲ್‌) ಪಂದ್ಯಗಳು ನಡೆಯಲಿವೆ. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಆರು ತಂಡಗಳು ಪೈಪೋಟಿ ನಡೆಸಲಿವೆ. ಪ್ರತಿ ತಂಡದಲ್ಲಿ 15 ಸದಸ್ಯರಿದ್ದು, ಒಟ್ಟು 180 ಆಟಗಾರರು ಕಣಕ್ಕಿಳಿಯಲಿದ್ದಾರೆ. ಸ್ಪರ್ಧೆಯು ಟಿ20 ಮಾದರಿಯಲ್ಲಿದೆ. ಆದರೆ ತಂಡಗಳು ಅರ್ಹತೆ ಪಡೆಯುವುದು ಹೇಗೆ ಎಂಬುದನ್ನು ಇನ್ನಷ್ಟೇ ನಿರ್ಧರಿಸಲಾಗುವುದು. ಅಮೆರಿಕ ಆತಿಥೇಯ ರಾಷ್ಟ್ರವಾದ ಕಾರಣ ನೇರ ಪ್ರವೇಶ ಪಡೆಯಬಹುದು. ಆದ್ದರಿಂದ ಅರ್ಹತೆ ಪಡೆಯಲು 5 ರಾಷ್ಟ್ರಗಳಷ್ಟೇ ಉಳಿದಂತಾಗುತ್ತದೆ.

ಇದನ್ನೂ ಓದಿ LA 2028 Olympics: ದಕ್ಷಿಣ ಕ್ಯಾಲಿಫೋರ್ನಿಯಾದ ಪೊಮೊನಾ ನಗರದಲ್ಲಿ ಒಲಿಂಪಿಕ್ಸ್‌ ಕ್ರಿಕೆಟ್ ಆಯೋಜನೆ

ಡಬಲ್‌ ಹೆಡರ್‌ ಸೇರಿದಂತೆ ಉಳಿದ ಎಲ್ಲಾ ದಿನಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಒಲಿಂಪಿಕ್ಸ್‌ ಸಂಘಟನಾ ಸಮಿತಿ ತಿಳಿಸಿದೆ. ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ಕ್ರಿಕೆಟ್‌ ಆಡಿದ್ದು 1900ರಲ್ಲಿ. ಅಂದಿನ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 4 ತಂಡಗಳು ಆಡಬೇಕಿತ್ತು. ಗ್ರೇಟ್‌ ಬ್ರಿಟನ್‌, ಫ್ರಾನ್ಸ್‌, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌. ಆದರೆ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ಹಿಂದೆ ಸರಿದ ಕಾರಣ ಕೊನೆಗೆ ಗ್ರೇಟ್‌ ಬ್ರಿಟನ್‌ ಮತ್ತು ಫ್ರಾನ್ಸ್‌ ನಡುವೆ ಟೆಸ್ಟ್‌ ಮಾದರಿಯಲ್ಲಿ 2 ದಿನಗಳ ಒಂದು ಪಂದ್ಯವನ್ನು ಆಡಲಾಯಿತು. ಇದನ್ನು ಗ್ರೇಟ್‌ ಬ್ರಿಟನ್‌ 158 ರನ್ನುಗಳಿಂದ ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತ್ತು.

ಕ್ರಿಕೆಟ್‌ ಮಾತ್ರವಲ್ಲದೆ ಐದು ಹೊಸ ಕ್ರೀಡೆಗಳನ್ನು ಸೇರಿಸಲಾಗಿದೆ. ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸ್) ಮತ್ತು ಸ್ಕ್ವ್ಯಾಷ್‌ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದ ಇತರ ಕ್ರೀಡೆಗಳು.