Saturday, 14th December 2024

41ನೇ ವಸಂತಕ್ಕೆ ಕಾಲಿಟ್ಟ ಬೌಲರ್ ಲಸಿತ್ ಮಾಲಿಂಗ

ಕೋಲಂಬೋ: ವಿಭಿನ್ನ ಶೈಲಿಯ ಬೌಲಿಂಗ್ ನಿಂದಲೇ ಬ್ಯಾಟ್ಸ್ ಮನ್‌ಗಳಿಗೆ ಕಾಟ ನೀಡುತ್ತಿದ್ದ ವೇಗದ ಬೌಲರ್ ಲಸಿತ್ ಮಾಲಿಂಗ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಲಸಿತ್ ಮಾಲಿಂಗ 2004 ಜುಲೈ 1 ರಂದು ನಡೆದ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಮೂಲಕ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ 2004 ಜುಲೈ 17 ರಲ್ಲಿ ಶ್ರೀಲಂಕಾ ಹಾಗೂ ಯು.ಎ.ಇ. ನಡುವೆ ನಡೆದ ಏಕದಿನ ಸರಣಿಯಲ್ಲಿ ಭಾಗವಹಿಸಿದರು.

ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲೇ ಸುಮಾರು ವರ್ಷಗಳ ಕಾಲ ಆಡಿರುವ ಇವರು ಐಪಿಎಲ್ ನಲ್ಲಿ ಒಂದೇ ತಂಡದಲ್ಲಾಡುವ ಮೂಲಕ 170 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲಸಿತ್ ಮಾಲಿಂಗ ನಾಯಕತ್ವದಲ್ಲಿ 2014ರಲ್ಲಿ ಶ್ರೀಲಂಕಾ ತಂಡ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ದಾಖಲೆ ಬರೆದಿತ್ತು. ಇಂದು ಮುಂಬೈ ಇಂಡಿಯನ್ಸ್ ಫ್ರಾನ್ಚೈಸಿ ಸೇರಿದಂತೆ ಹಲವಾರು ಹಿರಿಯ ಹಾಗೂ ಯುವ ಕ್ರಿಕೆಟಿಗರು ಲಸಿತ್ ಮಾಲಿಂಗ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.