Wednesday, 11th December 2024

ಬಾಂಗ್ಲಾದೇಶ ಕ್ರಿಕೆಟಿಗ ಮಹಮದುಲ್ಲಗೆ ಕೋವಿಡ್-19 ದೃಢ

ಧಾಕಾ: ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಟಿ20 ನಾಯಕ ಮಹಮದುಲ್ಲಗೆ ಕೋವಿಡ್-19 ದೃಢಪಟ್ಟಿದೆ.

ಹೀಗಾಗಿ ಮುಂಬರಲಿರುವ ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಲ್‌ಎಲ್) ಅನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಡೆಯುತ್ತಿರುವ ಯುಎಇಯಿಂದಲೇ ಮಹಮದುಲ್ಲ ಪಾಕ್‌ಗೆ ಪ್ರಯಾಣಿಸುವುದರಲ್ಲಿದ್ದರು.

34ರ ಹರೆಯದ ಮಹಮದುಲ್ಲ ಭಾನುವಾರ ದುಬೈ ಮೂಲಕ ಪಾಕಿಸ್ತಾನಕ್ಕೆ ವಿಮಾನ ಪ್ರಯಾನ ಮಾಡಬೇಕಿತ್ತು. ಆದರೆ ಕೊರೊನಾ ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದಿರುವುದರಿಂದ ಮಹಮದುಲ್ಲ ಸೆಲ್ಫ್ ಐಸೊಲೇಶನ್‌ಗೆ ಹೋಗಿದ್ದಾರೆ.

ಬಾಂಗ್ಲಾದೇಶ ಸರ್ಕಾರದ ನಿಯಮದ ಪ್ರಕಾರ ದೇಶದಿಂದ ಹೊರ ಹೋಗುವಾಗ ಕೋವಿಡ್-19 ನೆಗೆಟಿವ್ ಸರ್ಟಿಫಿಕೇಟ್ ಸಲ್ಲಿಸ ಬೇಕು. ಮಹಮದುಲ್ಲ ಮತ್ತು ತಮೀಮ್ ಇಕ್ಬಾಲ್‌ ಅವರನ್ನು ಪಿಎಸ್‌ಎಲ್ ಪ್ಲೇ ಆಫ್‌ಗೆ ವಿದೇಶಿ ಬದಲಿ ಆಟಗಾರರಾಗಿ ಕರೆಯ ಲಾಗಿತ್ತು.

ತಮೀಮಿ ಇಕ್ಬಾಲ್ ನ.10ರಂದು ಪಿಎಸ್‌ಎಲ್‌ಗಾಗಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಲಾಹೋರ್ ಕಲಂದರ್‌ನಲ್ಲಿ ಕ್ರಿಸ್‌ ಲಿನ್‌ಗೆ ಬದಲಿ ಆಟಗಾರರಾಗಿ ತಮೀಮ್ ಸೇರಿಕೊಳ್ಳಲಿದ್ದಾರೆ. ಪಿಎಲ್‌ಎಲ್ ಪ್ಲೇ ಆಫ್ ಪಂದ್ಯಗಳು ನವೆಂಬರ್ 2 ಅಥವಾ 3ನೇ ವಾರದಲ್ಲಿ ಆರಂಭವಾಗಬಹುದು.