Tuesday, 10th December 2024

ಪುರುಷರ ಹಾಕಿ ತಂಡದ ಜೈತ್ರ ಯಾತ್ರೆ: ಅರ್ಜೆಂಟೀನಾವನ್ನು ಸೋಲಿಸಿದ ಭಾರತ

ಟೋಕಿಯೋ : ಭಾರತ ಪುರುಷರ ಹಾಕಿ ತಂಡವು, ಗೆಲುವಿನ ಜೈತ್ರ ಯಾತ್ರೆಯನ್ನು ಮುಂದು ವರಿಸಿದ್ದಾರೆ.

ಗುರುವಾರ ನಡೆದ ಪೂಲ್ ಎ ಪಂದ್ಯದಲ್ಲಿ ಅರ್ಜೆಂಟೀನಾವನ್ನು 3-1 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಭಾರತ ಪರ ವರುಣ್, ವಿವೇಕ್ ಸಾಗರ್ ಮತ್ತು ಹರ್ಮನ ಪ್ರೀತ್ ಗೋಲು ಗಳಿಸಿದರು. ಭಾರತದ ಪುರುಷರ ಹಾಕಿ ತಂಡವು ಒಲಿಂಪಿಕ್ ಕ್ರೀಡಾಕೂಟದ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ಆರು ತಂಡಗಳ ಪೂಲ್‌ನಲ್ಲಿ ಅರ್ಜೆಂಟೀನಾ ಐದನೇ ಸ್ಥಾನದಲ್ಲಿದೆ ಮತ್ತು ಕ್ವಾರ್ಟರ್‌ಫೈನಲ್ ಬೆರ್ತ್‌ನ ಉಳಿಯಲು ಶುಕ್ರವಾರ ನಡೆಯಲ್ಲಿರುವ ತಮ್ಮ ಅಂತಿಮ ಪ್ರಾಥಮಿಕ ಪಂದ್ಯದಲ್ಲಿ ನ್ಯೂಜಿಲೆಂಡ್‌ರನ್ನು ಸೋಲಿಸುವ ಅಗತ್ಯವಿದೆ.