ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲಿನತ್ತ ಬಹು ತೇಕ ಮುಖಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಗೆಲ್ಲಿಸಿ ದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ 156 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮುಗ್ಗರಿಸುತ್ತಾ ಸಾಗಿತ್ತು. ಅಂಬಾಟಿ ರಾಯಿಡು ರಾಬಿನ್ ಉತ್ತಪ್ಪ ಹೋರಾಟ ಸಿಎಸ್‌ಕೆಯನ್ನು ಪಂದ್ಯದಲ್ಲಿ ಮುಂದುವರಿಯುವಂತೆ ಮಾಡಿತ್ತು. ಆದರೆ ಅಂತಿಮ ಹಂತದಲ್ಲಿ ಎಂಎಸ್ ಧೋನಿ ಹಾಗೂ ಡ್ವೇಯ್ನ್ ಪ್ರಿಟೋರಿಯಸ್ ಹೋರಾಟ ತಂಡಕ್ಕೆ ಗೆಲುವಿನ ಸಾಧ್ಯತೆ ಯನ್ನು ತೆರೆದಿಟ್ಟಿತ್ತು. ಅಂತಿಮ ಓವರ್‌ನಲ್ಲಿ ಎಂಎಸ್ ಧೋನಿ ಗೆಲುವಿಗೆ ಅಗತ್ಯವಿದ್ದ 17 ರನ್‌ಗಳನ್ನು ಕಲೆ ಹಾಕಿವ ಮೂಲಕ ಮುಂಬೈ ಇಂಡಿಯನ್ಸ್‌ಗೆ ಟೂರ್ನಿಯಲ್ಲಿ ಸತತ 7ನೇ ಬಾರಿಗೆ ಸೋಲಿನ ರುಚಿ ತೋರಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕ ಹೀನಾಯ ಪ್ರದರ್ಶನ ನೀಡಿತು. ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಇಬ್ಬರೂ ಶೂನ್ಯ ಸುತ್ತಿ ಮೊದಲ ಓವರ್‌ನಲ್ಲಿಯೇ ಪೆವಿಲಿಯನ್ ಸೇರಿ ಕೊಂಡರು. ಡೆವಾಲ್ಡ್ ಬ್ರೆವಿಸ್ ಕೂಡ ನಾಲ್ಕು ರನ್‌ಗಳಿಗೆ ಔಟಾಗಿ ಹೊರನಡೆದರು. ಆದರೆ ಮುಂಬೈ ಇಮಡಿಯನ್ಸ್ ತಂಡದ ಮಧ್ಯಮ ಕ್ರಮಾಂಕ ಈ ಪಂದ್ಯದಲ್ಲಿ ತಂಡಕ್ಕೆ ಬಲ ತುಂಬುವಲ್ಲಿ ಯಶಸ್ವಿಯಾಯಿತು.
ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಹೃತಿಕ್ ಶೊಕೀನ್ ಹಾಗೂ ಅಂತಿಮ ಹಂತದಲ್ಲಿ ಜೈದೇವ್ ಉನಾದ್ಕಟ್ ಅವರ ಮಹತ್ವದ ಕೊಡುಗೆಯ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 155 ರನ್‌ಗಳಿಸುವಲ್ಲಿ ಯಶಸ್ವಿ ಯಾಯಿತು.
ಸವಾಲಿನ ಗುರಿ ಸ್ವೀಕರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಕೂಡ ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಭಿನ್ನವಾಗಿರಲಿಲ್ಲ. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಹಾಗೂ ಮಿಚೆಲ್ ಸ್ಯಾಂಟ್ನರ್ ವಿಕೆಟ್‌ಅನ್ನು ಶೀಘ್ರವಾಗಿ ಕಳೆದುಕೊಂಡಿತು. ಆದರೆ ನಂತರ ರಾಬಿನ್ ಉತ್ತಪ್ಪ ಹಾಗೂ ಅಂಬಾಟಿ ರಾಯುಡು ಅವರಿಂದು ಉತ್ತಮ ಪ್ರದರ್ಶನ ಬಂದಿತು.
ಅಂತಿಮ ಹಂತದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಡ್ವೇಯ್ನ್ ಪ್ರಿಟೋರಿಯಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಪ್ರಿಟೋರಿಯಸ್ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಆದರೆ ಉಳಿದ ಐದು ಎಸೆತಗಳಲ್ಲಿ ಎಂಎಸ್ ಧೋನಿ ಅಬ್ಬರದ ಪ್ರದರ್ಶನ ನೀಡಿದ್ದು ತಂಡಕ್ಕೆ ಅಗತ್ಯವಿದ್ದ 17 ರನ್‌ಗಳನ್ನು ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.