Wednesday, 11th December 2024

ಟಾಸ್ ಗೆದ್ದ ಮುಂಬೈ ತಂಡ ಬ್ಯಾಟಿಂಗ್ ಆಯ್ಕೆ

ಶಾರ್ಜಾ: ತಲಾ ಎರಡು ಪಂದ್ಯ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಭಾನುವಾರದ ಶಾರ್ಜಾ ಅಂಗಳದಲ್ಲಿ ಮುಖಾಮುಖಿಯಾಗುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.

ವಾರ್ನರ್‌ ಸಾರಥ್ಯದ ಹೈದರಾಬಾದ್‌ ತಂಡ ಕಳೆದ ಶುಕ್ರವಾರದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರಂಭಿಕ ಆಘಾತ ಎದುರಿಸಿ ದ್ದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಪ್ರಿಯಮ್‌ ಮತ್ತು ಅಭಿಷೇಕ್‌ ಶರ್ಮ ಜವಾಬ್ದಾರಿಯುತ ಆಟವಾಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿದ್ದರು. ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಮೇಲೆ ತಂಡ ಹೆಚ್ಚು ಭರವಸೆ ಇರಿಸಿದೆ.

ಮುಂಬೈ ಮೇಲ್ನೋಟಕ್ಕೆ ಹೈದರಾ ಬಾದ್‌ಗಿಂತ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್‌ನಲ್ಲಿ ನಾಯಕ ರೋಹಿತ್‌ ಶರ್ಮ, ಕ್ವಿಂಟನ್‌ ಡಿ ಕಾಕ್‌, ಪೊಲಾರ್ಡ್‌, ಪಾಂಡ್ಯ ಬ್ರದರ್ಸ್‌, ಇಶಾನ್ ಕಿಶನ್ , ಬೌಲಿಂಗ್‌ನಲ್ಲಿ ಬುಮ್ರಾ, ರಾಹುಲ್‌ ಚಹರ್‌, ಜೇಮ್ಸ್‌ ಪ್ಯಾಟಿನ್ಸನ್‌, ಟ್ರೆಂಟ್‌ ಬೌಲ್ಟ್ ಅವರೆಲ್ಲ ಮುಂಬೈ ತಂಡಕ್ಕೆ ಶಕ್ತಿ ತುಂಬಿದ್ದಾರೆ.

ತಂಡಗಳು: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾ), ಕ್ವಿಂಟನ್ ಡಿ ಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.

ಸನ್‌ರೈಸರ‍್ಸ್ ಹೈದರಾಬಾದ್: ಡೇವಿಡ್ ವಾರ್ನರ್‌(ನಾ), ಜಾನಿ ಬೇರ್‌’ಸ್ಟೋ (ವಿಕೀ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್‌, ಪ್ರಿಯಮ್‌ ಗರ್ಗ್‌, ಅಭಿಷೇಕ್‌ ಶರ್ಮಾ, ಅಬ್ದುಲ್ ಸಮದ್‌, ರಶೀದ್‌ ಖಾನ್, ಸಂದೀಪ್ ಶರ್ಮಾ, ಸಿದ್ದಾರ್ಥ್‌ ಕೌಲ್‌, ಟಿ.ನಟರಾಜನ್‌.