Wednesday, 11th December 2024

ಮುಖ್ಯ ಆಯ್ಕೆಗಾರ ಹುದ್ದೆ ತೊರೆಯಲು ಮಿಸ್ಬಾ ನಿರ್ಧಾರ

ಕರಾಚಿ: ಪಾಕಿಸ್ಥಾನ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮತ್ತು ಆಯ್ಕೆಗಾರನಾಗಿರುವ ಮಿಸ್ಬಾ ಉಲ್‌ ಹಕ್‌ ಅವರು ಇದೀಗ ಮುಖ್ಯ ಆಯ್ಕೆಗಾರ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಪಾತ್ರಕ್ಕೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಮಿಸ್ಬಾ ಈ ನಿರ್ಧಾರಕ್ಕೆ ಬಂದಿ ದ್ದಾರೆ. ನ. 30ಕ್ಕೆ ಮುಖ್ಯ ಆಯ್ಕೆಗಾರ ಹುದ್ದೆಯಿಂದ ಕೆಳಗಿಳಿ ಯವುದಾಗಿ ಮಿಸ್ಬಾ ಅವರು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ)ಗೆ ಮಾಹಿತಿ ನೀಡಿದ್ದಾರೆ ಎಂದು ಮಿಸ್ಬಾ ಅವರು ತಿಳಿಸಿದ್ದಾರೆ.

ಕಳೆದ ವರ್ಷದ ಸಪ್ಟೆಂಬರ್ ನಲ್ಲಿ ಮಿಸ್ಬಾ ಹಕ್, ಮುಖ್ಯ ಕೋಚ್ ಮತ್ತು ಮುಖ್ಯ ಆಯ್ಕೆಗಾರ ನಾಗಿ ಆಯ್ಕೆಯಾಗಿದ್ದರು. ಮೂರು ವರ್ಷದ ಅವಧಿಯ ಒಪ್ಪಂದ ಮಾಡಲಾಗಿತ್ತು. ಮಿಸ್ಬಾ ಕೋಚಿಂಗ್ ಅವಧಿಯಲ್ಲಿ ಪಾಕ್ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದೆ.

ಶ್ರೀಲಂಕಾ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ಗೆದ್ದ ತಂಡ ನಂತರ ಟಿ20 ಸರಣಿಯಲ್ಲಿ ಸೋಲನುಭವಿಸಿತ್ತು. ನಂತರ ಆಸೀಸ್ ವಿರುದ್ಧದ ಟಿ20 ಮತ್ತು ಟೆಸ್ಟ್ ಸರಣಿಯಲ್ಲಿ ಒಂದೂ ಪಂದ್ಯವನ್ನು ಗೆಲ್ಲಲು ಪಾಕ್ ವಿಫಲವಾಗಿತ್ತು.