Friday, 13th December 2024

2022 ಏಕದಿನ ವಿಶ್ವಕಪ್‌ ನನ್ನ ಕೊನೆಯ ಟೂರ್ನಮೆಂಟ್‌: ಮಿಥಾಲಿ ನಿವೃತ್ತಿ ಸುಳಿವು

ನವದೆಹಲಿ:  ಅನುಭವಿ ಕ್ರಿಕೆಟ್‌ ಆಟಗಾರ್ತಿ, ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ ಅವರು ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆಯುವ 2022ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ನೇಪಥ್ಯಕ್ಕೆ ಸರಿಯುವ ಯೋಜನೆಯಲ್ಲಿದ್ದೇನೆ ಎಂದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ ಪೂರೈಸಿದ ಏಕೈಕ ಆಟಗಾರ್ತಿ ಎಂಬುದು ಮಿಥಾಲಿ ರಾಜ್‌ ಹೆಗ್ಗಳಿಕೆಯಾಗಿದೆ.

“21 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ನೇಪಥ್ಯಕ್ಕೆ ಸರಿಯುವ ಸಮಯ ಬಂದಿದೆ. 2022ರ ಏಕದಿನ ವಿಶ್ವಕಪ್‌ ನನ್ನ ಮುಂದಿರುವ ಅಂತಿಮ ನಿಲ್ದಾಣ’ ಎಂಬುದಾಗಿ ಮಿಥಾಲಿ ಹೇಳಿದರು.

ಬೋರಿಯ ಮಜುಂದಾರ್ ಮತ್ತು ಗೌತಮ್‌ ಭಟ್ಟಾಚಾರ್ಯ ಬರೆದ “1971: ದಿ ಬಿಗಿನಿಂಗ್‌ ಆಫ್ ಇಂಡಿಯಾಸ್‌ ಕ್ರಿಕೆಟಿಂಗ್‌ ಗ್ರೇಟ್‌ನೆಸ್‌’ ಪುಸ್ತಕ ಬಿಡುಗಡೆಯ ವರ್ಚುವಲ್‌ ಸಮಾರಂಭದ ವೇಳೆ ಮಿಥಾಲಿ ತಮ್ಮ ಭವಿಷ್ಯದ ನಿರ್ಧಾರದ ಕುರಿತು ಹೇಳಿ ಕೊಂಡರು.