Friday, 13th December 2024

Mohammad Azharuddin: ಅಜರುದ್ದೀನ್‌ಗೆ ಇಡಿ ಸಮನ್ಸ್ ಬಿಸಿ

ಹೈದರಾಬಾದ್‌: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​(HCA) ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ತೆಲಂಗಾಣದ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ಗೆ(Mohammad Azharuddin) ಸಮನ್ಸ್(ED summons) ನೀಡಿದೆ.

ಈ ಹಿಂದೆ ಎಚ್‌ಸಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅಜರುದ್ದೀನ್ ಅವರ ಅಧಿಕಾರಾವಧಿಯಲ್ಲಿ ಹಣ ದುರುಪಯೋಗದ ಆರೋಪದ ಕೇಳಿ ಬಂದಿತ್ತು. ಹೀಗಾಗಿ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ. ಇದು ಮೊದಲ ಸಮನ್ಸ್ ಆಗಿದ್ದು, ಅಜರುದ್ದೀನ್ ಇಂದು(ಗುರುವಾರ) ತನಿಖಾ ಸಂಸ್ಥೆಯ ಮುಂದೆ ಹಾಜರಾಗಬೇಕು.

ಹೈದರಾಬಾದ್‌ನ ಉಪ್ಪಲದಲ್ಲಿರುವ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂಗಾಗಿ ಡೀಸೆಲ್ ಜನರೇಟರ್, ಅಗ್ನಿಶಾಮಕ ವ್ಯವಸ್ಥೆಗಳು ಮತ್ತು ಕ್ಯಾನೋಪಿಗಳ ಖರೀದಿಗೆ ಮಂಜೂರು ಮಾಡಿದ 20 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2019ರಲ್ಲಿ ಹೈದ್ರಾಬಾದ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಅಜರುದ್ದೀನ್‌ ಆಯ್ಕೆಯಾಗಿದ್ದರು.

ಇದನ್ನೂ ಓದಿ ‌Virat Kohli: ಬೆಂಗಾಳಿ ಮಾತನಾಡಿದ ವಿರಾಟ್‌ ಕೊಹ್ಲಿ; ವಿಡಿಯೊ ವೈರಲ್

ಐಪಿಸಿ ಸೆಕ್ಷನ್ 406, 409, 420, 465, 467, 471 ಮತ್ತು 120-ಬಿ ಅಡಿಯಲ್ಲಿ ವಂಚನೆ, ಫೋರ್ಜರಿ ಮತ್ತು ಪಿತೂರಿ ಆರೋಪಗಳನ್ನು ಹೊರಿಸಲಾಗಿತ್ತು. ಸುನೀಲ್ ಕಾಂಟೆ ಬೋಸ್ ಅವರು ದೂರು ನೀಡಿದ್ದರು. “ಮಧ್ಯಂತರ ವಿಧಿವಿಜ್ಞಾನ ಲೆಕ್ಕಪರಿಶೋಧನಾ ವರದಿಯ ಆಧಾರದ ಮೇಲೆ, ಮೂರನೇ ಪಕ್ಷದ ಮಾರಾಟಗಾರರೊಂದಿಗೆ ಎಚ್​​ಪಿಸಿಎ ಪರವಾಗಿ ಮಾಡಿಕೊಂಡ ಕೆಲವು ವಹಿವಾಟುಗಳು ಸುಳ್ಳು. ಅದೇ ರಿತಿ ವ್ಯವಹಾರ ಸಂಸ್ಥೆಯ ಹಿತಾಸಕ್ತಿಗೆ ಹಾನಿ ಮಾಡಿರುವುದು ಸ್ಪಷ್ಟವಾಗಿದೆ ಎಂದು ದೂರುದಾರರು ಹೇಳಿದ್ದರು.

ಭಾರತ ತಂಡದ ಪರ 99 ಟೆಸ್ಟ್ ಹಾಗೂ 334 ಏಕದಿನ ಪಂದ್ಯಗಳನ್ನು ಆಡಿರುವ ಅಜರುದ್ದೀನ್ ಅವರು ಭಾರತ ಕ್ರಿಕೆಟ್ ತಂಡದ ಯಶಸ್ವೀ ನಾಯಕರಲ್ಲಿ ಒಬ್ಬರಾಗಿದ್ದಾರೆ. ಆದರೆ ಮ್ಯಾಚ್ ಫಿಕ್ಸಿಂಗ್ ಆರೋಪ ಅಜರ್ ಅವರ ಕ್ರಿಕೆಟ್ ಬದುಕನ್ನು ಮುಗಿಸಿಬಿಟ್ಟಿತ್ತು. ತನ್ನ ಮೇಲೆ ವಿಧಿಸಲಾಗಿದ್ದ ಜೀವಾವಧಿ ನಿಷೇಧವನ್ನು 2012ರಲ್ಲಿ ನ್ಯಾಯಾಲಯದ ಮೂಲಕ ತೆರವುಗೊಳಿಸಿಕೊಳ್ಳುವಲ್ಲಿ ಅಜ್ಹರ್ ಯಶಸ್ವಿಯಾಗಿದ್ದರು.