Friday, 13th December 2024

40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ಯಾಪ್ಟನ್ ಕೂಲ್

ಮುಂಬೈ/ಜಾರ್ಖಂಡ್‌: ಭಾರತದ ಮಾಜಿ ಕ್ರಿಕೆಟಿಗ, ಕ್ಯಾಪ್ಟನ್ ಕೂಲ್ ಎಂಎಸ್‌ ಧೋನಿ ಬುಧವಾರ ತಮ್ಮ 40ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

2004ರಂದು ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಪಂದ್ಯವನ್ನಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಧೋನಿ ನಾಯಕತ್ವದಲ್ಲಿ ಭಾರತ ತಂಡ 2007ರಂದು ಐಸಿಸಿ ವರ್ಲ್ಡ್ ಟಿ ಟ್ವೆಂಟಿ ಟ್ರೋಫಿಯನ್ನು ಎತ್ತಿಹಿಡಿದಿತ್ತು. 2011ರಂದು ವಿಶ್ವಕಪ್ ತಂದುಕೊಟ್ಟ ಯಶಸ್ವಿ ನಾಯಕರಾದರು.

ಎಂಎಸ್ ಧೋನಿ ತಮ್ಮ ಚಾಣಾಕ್ಷತನದಿಂದ ಬೌಲರ್ ಗಳಿಗೆ ಸಲಹೆ ನೀಡುವ ಮೂಲಕ ಎಂತಹ ಘಟಾನುಘಟಿ ಬ್ಯಾಟ್ಸ್‌ಮನ್‌ ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಧೋನಿ ಕ್ಯಾಪ್ಟನ್ ಶಿಪ್ ನಲ್ಲಿ 2013ರಂದು ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲಾಗಿದೆ.

2020 ಆಗಸ್ಟ್ 15ರಂದು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರು. ಐಪಿಎಲ್ ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳಿಂದ, ಕ್ರಿಕೆಟಿಗರಿಂದ ಮುಖ್ಯ ವಾಗಿ ಸುರೇಶ್‌ ರೈನಾ, ಹರ್ಭಜನ್‌ ಸಿಂಗ್‌ ಹಾಗೂ ಸಚಿನ್ ತೆಂಡುಲ್ಕರ್‌ ಮುಂತಾದವ ರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.