Friday, 13th December 2024

MS Dhoni: ಥಾಯ್ಲೆಂಡ್ ಬೀಚ್‌ನಲ್ಲಿ ಧೋನಿ ಎಂಜಾಯ್; ವಿಡಿಯೊ ವೈರಲ್‌

ಫುಕೆಟ್(ಥಾಯ್ಲೆಂಡ್): ಟೀಮ್‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ(MS Dhoni) ಅವರು ಪ್ರತಿ ಐಪಿಎಲ್‌ ಟೂರ್ನಿ ಆರಂಭ ಮತ್ತು ಅಂತ್ಯದ ಬಳಿಕ ವಿದೇಶಿ ಪ್ರವಾಸ ಕೈಗೊಳ್ಳುವ ಮೂಲಕ ರಿಲ್ಯಾಕ್ಸ್(Dhoni enjoys family vacation)​ ಮೂಡ್​ಗೆ ಜಾರುತ್ತಾರೆ. ಇದೀಗ 18ನೇ ಆವೃತ್ತಿಯ ಐಪಿಎಲ್‌ ಹರಾಜಿಗೂ ಮುನ್ನ ಧೋನಿ ತಮ್ಮ ಪತ್ನಿ ಮತ್ತು ಮಗಳ ಜತೆ ಥಾಯ್ಲೆಂಡ್(MS Dhoni vacation in Thailand) ಪ್ರವಾಸದಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಪ್ರವಾಸದಲ್ಲಿ ಧೋನಿ ಮೋಜು ಮಸ್ತಿ ಮಾಡುತ್ತಿರುವ ಫೋಟೊಗಳನ್ನು ಪುತ್ರಿ ಝೀವಾ(Ziva) ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಧೋನಿ ಥಾಯ್ಲೆಂಡ್‌ನ ಸುಂದರ ಬೀಚ್‌ಗಳಲ್ಲಿ ಈಜಾಡುತ್ತಾ ಮಸ್ತಿ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಧೋನಿ ಜತೆ ಝೀವಾ ಕೂಡ ಅಷ್ಟೇ ಎಂಜಾಯ್ ಮಾಡಿದ್ದಾರೆ. ಝೀವಾ ಬೀಚ್‌ನಲ್ಲಿ ನಿಂತು ಸೂರ್ಯಾಸ್ತ ನೋಡುವ ಫೋಟೊವನ್ನು ಕೂಡ ಕಾಣಬಹುದಾಗಿದೆ. ಸಾಮಾನ್ಯವಾಗಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ಆದರೆ, ಧೋನಿ ಪ್ರವಾಸದ ಫೋಟೊಗಳನ್ನು ಅವರ ಮಗಳು ಮತ್ತು ಪತ್ನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಧೋನಿ ಪುತ್ರಿ ಝೀವಾ ಇನ್‌ಸ್ಟಾಗ್ರಾಮ್‌ನಲ್ಲಿ 2.8 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿಯೂ ಧೋನಿ ಆಡಲಿದ್ದಾರೆ. ಈಗಾಗಲೇ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಅನ್‌ಕ್ಯಾಪ್ಡ್‌ ಆಟಗಾರರ ಕೋಟಾದಲ್ಲಿ ತಂಡಕ್ಕೆ ರಿಟೇನ್‌ ಮಾಡಿದೆ. ಧೋನಿ ಈ ಬಾರಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ MS Dhoni: ಅಭಿಮಾನಿ ಜತೆ ಬೈಕ್‌ ರೈಡ್‌ ಮಾಡಿದ ಧೋನಿ; ಇಲ್ಲಿದೆ ವಿಡಿಯೊ

ಮೆಗಾ ಹರಾಜು ಪ್ರಕ್ರಿಯೆ ನವೆಂಬರ್‌ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ(Jeddah) ನಡೆಯಲಿದೆ. ಒಟ್ಟು 1,574 ಕ್ರಿಕೆಟಿಗರು (ಭಾರತದ 1,165 ಮತ್ತು ವಿದೇಶದ 409 ಆಟಗಾರರು) ಮೆಗಾ ಆಕ್ಷನ್‌ಗೆ ಸಾಕ್ಷಿಯಾಗಲಿದ್ದಾರೆ. 320 ಕ್ಯಾಪ್ಡ್ ಪ್ಲೇಯರ್, 1,224 ಅನ್‌ಕ್ಯಾಪ್ಡ್ ಆಟಗಾರರು, ಅಸೋಸಿಯೇಟ್‌ ದೇಶಗಳ 30 ಕ್ರಿಕೆಟಿಗರು ಇದರಲ್ಲಿ ಸೇರಿದ್ದಾರೆ. ಸದ್ಯ 10 ತಂಡಗಳು ಒಟ್ಟಾರೆ 46 ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, ಇದಕ್ಕಾಗಿ 558.5 ಕೋಟಿ ವಿನಿಯೋಗಿಸಿವೆ. ಹರಾಜಿನಲ್ಲಿ ಎಲ್ಲ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಒಟ್ಟು 641.5 ಕೋಟಿ ಬಜೆಟ್ ಉಳಿಸಿಕೊಂಡಿವೆ. ಪ್ರತಿ ತಂಡದ ಬಜೆಟ್ ಮಿತಿ 120 ಕೋಟಿ ರೂ. ಆಗಿದೆ. ಎರಡು ದಿನಗಳ ಹರಾಜಿನಲ್ಲಿ ದೊಡ್ಡ ಕ್ರಿಕೆಟ್ ತಾರೆಗಳಿಗಾಗಿ ಫ್ರಾಂಚೈಸಿಗಳು ಬಿಡ್ಡಿಂಗ್‌ ನಡೆಸಲಿದೆ.