Friday, 13th December 2024

MS Dhoni: ಅಭಿಮಾನಿ ಜತೆ ಬೈಕ್‌ ರೈಡ್‌ ಮಾಡಿದ ಧೋನಿ; ಇಲ್ಲಿದೆ ವಿಡಿಯೊ

ರಾಂಚಿ: ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ಕೆಲವು ವರ್ಷಗಳು ಕಳೆದರೂ ಅಭಿಮಾನಿಗಳಿಗೆ ಅವರ ಮೇಲಿರುವ ಕ್ರೇಜ್​ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಧೋನಿಯ ಒಂದು ಆಟೋಗ್ರಾಫ್​ಗಾಗಿ ಈಗಲೂ ಅಭಿಮಾನಿಗಳು ಕಾದು ಕುಳಿತಿರುತ್ತಾರೆ.

ನಿವೃತ್ತಿ ಜೀವನವನ್ನು ಎಂಜಾಯ್‌ ಮಾಡುತ್ತಿರುವ ಧೋನಿ(MS Dhoni) ತಮ್ಮ ತವರಾದ ರಾಂಚಿಯಲ್ಲಿ ಆಗಾಗ ಕಾರು ಮತ್ತು ಬೈಕ್‌ಗಳ ಮೂಲಕ ಸವಾರಿ ಮಾಡುತ್ತಿರುತ್ತಾರೆ. ಇದೀಗ ಅಭಿಮಾನಿಯೊಬ್ಬರ ಬಯಕೆಯಂತೆ ಅವರ ಬೈಕ್‌ ಟ್ಯಾಂಕ್‌ ಮೇಲೆ (Dhoni signs bike for a fan) ಧೋನಿ ತಮ್ಮ ಸಹಿ ಹಾಕಿ ಆಟೋಗ್ರಾಫ್‌ ನೀಡಿದ್ದಾರೆ. ಬಳಿಕ ಅಭಿಮಾನಿಯನ್ನು ಬೈಕ್‌ನಲ್ಲಿ ಕೂರಿಸಿ ಜಾಲಿ ರೈಡ್‌ ಮಾಡಿದ್ದಾರೆ. ಈ ವಿಡಿಯೊ ವೈರಲ್‌(viral Photo) ಆಗಿದೆ. ಈ ವಿಡಿಯೊ ಕಂಡ ನೆಟ್ಟಿಗರು ನೀವು ಅದೃಷ್ಟಶಾಲಿ ಅಭಿಮಾನಿ ಎಂದು ಕಮೆಂಟ್‌ ಮಾಡಿದ್ದಾರೆ.

ಮೋಟಾರ್‌ ಸೈಕಲ್​​ಗಳು ಹಾಗೂ ಕಾರುಗಳ ಬಗ್ಗೆ ಎಂಎಸ್ ಧೋನಿ ಅವರ ಕ್ರೇಜ್​ ಎಲ್ಲರಿಗೂ ತಿಳಿದಿದೆ. ಅವರು ತಮ್ಮ ಗ್ಯಾರೇಜ್​ನಲ್ಲಿ ಹಲವಾರು ಆಕರ್ಷಕ ವಾಹನಗಳ ಸಂಗ್ರಹವನ್ನು ಹೊಂದಿದ್ದಾರೆ. ಬಿಡುವಿನ ವೇಳೆಯಲ್ಲಿ ಧೋನಿ ತಮಗಿಷ್ಟವಾದ ಕಾರು ಮತ್ತು ಬೈಕ್​ಗಳನ್ನು ಓಡಿಸುವ ಹಲವು ವಿಡಿಯೊಗಳು ವೈರಲ್ ಆಗುತ್ತಿರುತ್ತದೆ. ಅವರ ಅಭಿಮಾನಿಗಳು ಈ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ತಿಂಗಳ ಹಿಂದೆ ಧೋನಿ ಅವರು ಅಭಿಮಾನಿಯ ಬೈಕ್​ ಒಂದಕ್ಕೆ ಆಟೋಗ್ರಾಫ್ ಹಾಕುವ ಮೊದಲು ಬೈಕಿನ ಮುಂಭಾಗದ ಪ್ರದೇಶವನ್ನು ತಮ್ಮ ಟಿಶರ್ಟ್​ನಿಂದ ಒರೆಸಿ ಆ ಬಳಿಕ ಸಹಿ ಹಾಕಿದ್ದರು. ಬಳಿಕ ಧೋನಿ ಈ ಬೈಕ್​ ರೈಡ್​ ಮಾಡಿದ್ದರು.

ಇದನ್ನೂ ಓದಿ MS Dhoni: ವಿಶೇಷ ಪೂಜೆ ನಡೆಸಿ ದೀಪಾವಳಿ ಆಚರಿಸಿದ ಧೋನಿ; ವಿಡಿಯೊ ವೈರಲ್‌

ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕೆ

ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿಯೂ ಧೋನಿ ಆಡಲಿದ್ದಾರೆ. ಈಗಾಗಲೇ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಅನ್‌ಕ್ಯಾಪ್ಡ್‌ ಆಟಗಾರರ ಕೋಟಾದಲ್ಲಿ ತಂಡಕ್ಕೆ ರಿಟೇನ್‌ ಮಾಡಿದೆ. ಧೋನಿ ಈ ಬಾರಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ.

ರಿಷಭ್​ ಪಂತ್​ ಡೆಲ್ಲಿ ತಂಡದಿಂದ ಹೊರ ಬಂದಿದ್ದಾರೆ. ಅವರು ಚೆನ್ನೈ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಧೋನಿ ಮೊಣಕಾಲು ನೋವಿನಿಂದ ಬಳಲುತ್ತಿರುವ ಕಾರಣ ಪಂತ್​ ಅವರನ್ನು ಚೆನ್ನೈ ತಂಡಕ್ಕೆ ಸೇರಿಸಿಕೊಂಡು ಕೀಪಿಂಗ್​ ಹೊಣೆ ಅವರಿಗೆ ನೀಡುವ ಯೋಜನೆ ಚೆನ್ನೈ ತಂಡದ್ದಾಗಿದೆ. ಈ ಮೂಲಕ ಧೋನಿ ಇಂಪ್ಯಾಕ್ಟ್​ ಆಟಗಾರನಾಗಿ ತಂಡದ ಪರ ಇನ್ನೂ ಕೆಲ ಆವೃತ್ತಿಯಲ್ಲಿ ಧೋನಿಯನ್ನು ಆಡಿಸುವುದು ಫ್ರಾಂಚೈಸಿಯ ಯೋಜನೆಯಾಗಿದೆ. ಕಳೆದ ಆವೃತ್ತಿಯಲ್ಲಿ ಧೋನಿ ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು.