Saturday, 7th September 2024

ಐಸಿಸಿ ದಶಕದ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ಧೋನಿ

ನವದೆಹಲಿ: ವಿಶ್ವಕಪ್(2011) ಗೆದ್ದ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಐಸಿಸಿ ಪ್ರಕಟಿಸಿದ ದಶಮಾನದ ಏಕದಿನ ಕ್ರಿಕೆಟ್ ತಂಡದಲ್ಲಿ ನಾಯಕ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐಸಿಸಿ ಪ್ರಕಟಿಸಿದ್ದ ದಶಕದ ಟಿ-ಟ್ವೆಂಟಿ ತಂಡದಲ್ಲೂ ಧೋನಿ ನಾಯಕನಾಗಿ ಆಯ್ಕೆಯಾಗಿದ್ದರು.

ಐಸಿಸಿ ದಶಕದ ಏಕದಿನ ಕ್ರಿಕೆಟ್ ತಂಡದಲ್ಲಿ ಭಾರತದ ಮೂವರು ಆಟಗಾರರು ಸ್ಥಾನ ಗಳಿಸಿದ್ದು, ಧೋನಿ ಜೊತೆಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡಾ ಸ್ಥಾನ ಪಡೆದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಸ್ಟಾರ್ಕ್, ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಮತ್ತು ಇಮ್ರಾನ್ ತಾಹಿರ್, ಬಾಂಗ್ಲಾದೇಶ ತಂಡದ ಶಕೀಬ್ ಅಲ್ ಹಸನ್, ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಹಾಗೂ ಶ್ರೀಲಂಕಾ ತಂಡದ ಲಸಿತ್ ಮಾಲಿಂಗ ಸ್ಥಾನ ಪಡೆದಿದ್ದಾರೆ.

ಏಕದಿನ ದಶಕದ ತಂಡ : ರೋಹಿತ್ ಶರ್ಮಾ,ಡೇವಿಡ್ ವಾರ್ನರ್,ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಾಕೀಬ್ ಅಲ್ ಹಸನ್, ಮಹೀಂದ್ರ ಸಿಂಗ್ ಧೋನಿ (ನಾಯಕ), ಬೆನ್ ಸ್ಟೋಕ್ಸ್,ಮಿಚೆಲ್ ಸ್ಟ್ರಾರ್ಕ್, ಟ್ರೆಂಟ್ ಬೌಲ್ಟ್, ಇಮ್ರಾನ್ ತಾಹೀರ್,ಲಸಿತ್ ಮಾಲಿಂಗ

ಟಿ-ಟ್ವಿಂಟ್ ದಶಕದ ತಂಡ : ರೋಹಿತ್ ಶರ್ಮಾ,ಕ್ರಿಸ್ ಗೇಲ್,ಆರೋನ್ ಫಿಂಚ್,ವಿರಾಟ್ ಕೊಹ್ಲಿ,ಗ್ಲೆನ್ ಮ್ಯಾಕ್ಸ್ ವೆಲ್, ಮಹೀಂದ್ರ ಸಿಂಗ್ ಧೋನಿ (ನಾಯಕ),ಕಿರಾನ್ ಪೊಲಾರ್ಡ್,ರಶೀದ್ ಖಾನ್,ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ,

ಟೆಸ್ಟ್ ದಶಕದ ತಂಡ : ಅಲೆಸ್ಟರ್ ಕುಕ್,ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ (ನಾಯಕ) ಸ್ಟೀವ್ ಸ್ಮಿತ್, ಕುಮಾರ್ ಸಂಗಕಾರ,ಬೆನ್ ಸ್ಟೋಕ್ಸ್, ಆರ್ ಅಶ್ವಿನ್,ಡೇಲ್ ಸ್ಟೇನ್,ಸ್ಟುವರ್ಟ್ ಬ್ರಾಡ್,ಜೇಮ್ಸ್ ಆಯಂಡರ್ಸನ್.

ಐಸಿಸಿಯ ದಶಕ ಪ್ರಶಸ್ತಿಗಳ ಘೋಷಣೆ ನಾಳೆ ಆಗಲಿದ್ದು, ಪ್ರಶಸ್ತಿ ರೇಸ್ ನಲ್ಲಿ ವಿರಾಟ್ ಕೊಹ್ಲಿ ಮೂರು ವಿಭಾಗದಲ್ಲೂ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!