ನವದೆಹಲಿ: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಪರಾಸ್ ಖಾಡ್ಕ ಅವರಿಗೆ ಕೊರೊನಾ ವೈರಸ್ ದೃಢಪಟ್ಟಿದೆ.
ಈಗ ಅವರನ್ನು ಮನೆಯಲ್ಲಿಯೇ ಐಸೋಲೇಶನ್‌ನಲ್ಲಿ ಇರಿಸಲಾಗಿದೆ. “ಸಣ್ಣದಾಗಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು ಕಳೆದ ಎರಡು ದಿನಗಳಿಂದ ತಂಡದಿಂದ ಪ್ರತ್ಯೇಕಿಸಿಕೊಂಡಿದ್ದೇನೆ. ವಾಸನೆ ಹಾಗೂ ರುಚಿಯನ್ನು ನಿನ್ನೆ ಸಂಜೆಯಿಂದ ಕಳೆದು ಕೊಂಡ ಕಾರಣ ಪಿಸಿಆರ್ ಪರೀಕ್ಷೆಗೆ ಒಳಗಾದೆ. ಈಗ ವರದಿ ಬಂದಿದ್ದು ಕೊರೊನಾ ಇರುವುದು ದೃಢಪಟ್ಟಿದೆ” ಎಂದು ಪರಾಸ್ ಟ್ವೀಟ್ ಮಾಡಿದ್ದಾರೆ.
ಸದ್ಯ ನಾನು ಮನೆಯಲ್ಲಿಯೇ ಪ್ರತ್ಯೇಕವಾಗಿ ಉಳಿದುಕೊಂಡಿದ್ದೇನೆ. ವೈದ್ಯರ ಸೂಚನೆಯ ಪ್ರಕಾರವೇ ಎಲ್ಲಾ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಪರಾಸ್ ಖಾಡ್ಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
ಇತ್ತೀಚೆಗೆ ನೇಪಾಳ ಕ್ರಿಕೆಟ್ ತಂಡದ ಕೆಲ ಸದಸ್ಯೆಯರು ಕೊರೊನಾ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಪ್ರಮುಖ ಸ್ಪಿನ್ನರ್ ಸಂದೀಪ್ ಲಾಮಿಚ್ಚನ್ನೆ ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಅದಾದ ಬಳಿಕ ಅನುಭವಿ ಸ್ಪಿನ್ನರ್ ಬಸಂತ ರೆಗ್ಮಿ ಕೂಡ ಕೊರೊನಾ ವೈರಸ್‌ಗೆ ತುತ್ತಾಗಿದ್ದು ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ.