Sunday, 8th September 2024

ನೆದರ್ಲ್ಯಾಂಡ್ಸ್ ಬ್ಯಾಟಿಂಗ್​: ಆರಂಭಿಕರು ಅಲ್ಪ ಮೊತ್ತಕ್ಕೆ ಔಟ್

ಕೋಲ್ಕತ್ತಾ: ವಿಶ್ವಕಪ್​ನ 28ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನೆದರ್ಲ್ಯಾಂಡ್ಸ್ ಟಾಸ್​ ಗೆದ್ದು ಮೊದಲಿಗೆ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ವಿಶ್ವಕಪ್​ ಕ್ರೀಡಾ ಕೂಟದಲ್ಲಿ ಉಭಯ ತಂಡಗಳು ತಲಾ 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡು ಪಂದ್ಯಗಳು ಒಂದರಲ್ಲಿ ಗೆಲುವು ದಾಖಲಿಸಿ, ನಾಲ್ಕರಲ್ಲಿ ಸೋಲು ಕಂಡಿವೆ. ಅಂಕ ಪಟ್ಟಿಯಲ್ಲಿ ಬಾಂಗ್ಲಾ 8ನೇ ಸ್ಥಾನದಲ್ಲಿದ್ದರೆ, ​ನೆದರ್ಲ್ಯಾಂಡ್ಸ್​ 10ನೇ ಸ್ಥಾನದಲ್ಲಿದೆ.

ಇತ್ತೀಚಿನ ವರದಿ ಪ್ರಕಾರ, ನೆದರ್ಲ್ಯಾಂಡ್ಸ್ ಐದು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿ, ಸಂಕಷ್ಟದಲ್ಲಿದೆ. ಟಸ್ಕಿನ್ ಎರಡು ವಿಕೆಟ್ ಕಿತ್ತರು.

ಈಡನ್ ಗಾರ್ಡನ್​ನಲ್ಲಿ ಈ ವರೆಗೂ 31 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 18 ಪಂದ್ಯಗಳನ್ನು ಗೆದ್ದಿದ್ದರೆ, ಎರಡನೇ ಬ್ಯಾಟಿಂಗ್ ಮಾಡಿದ ತಂಡ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.

ತಂಡಗಳು, ನೆದರ್ಲ್ಯಾಂಡ್ಸ್​​ : ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡ್, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ/ವಿ.ಕೀ), ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.

ಬಾಂಗ್ಲಾದೇಶ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮೆಹಿದಿ ಹಸನ್ ಮಿರಾಜ್, ಮುಶ್ಫಿಕರ್ ರಹೀಮ್ (ವಿ.ಕೀ), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್

Leave a Reply

Your email address will not be published. Required fields are marked *

error: Content is protected !!