Thursday, 3rd October 2024

ಟೀಂ ಇಂಡಿಯಾಕ್ಕೆ ಕಿವೀಸ್‌ ಲಗಾಮು

ಸೌಥ್ಯಾಂಪ್ಟನ್: ನ್ಯೂಜಿಲೆಂಡ್ ವಿರುದ್ದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿ ಸಿದ ಭಾರತ ತಂಡ ಶನಿವಾರ ಆರಂಭದ ಮೂರು ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದೆ. ಇತ್ತೀಚಿನ ವರದಿ ಪ್ರಕಾರ, ಭಾರತ ಮೂರು ವಿಕೆಟ್‌ ನಷ್ಟಕ್ಕೆ ೧೦೧ ರನ್‌ ಗಳಿಸಿ, ತೆವಳುತ್ತಿತ್ತು.

ಸೌಥ್ಯಾಂಪ್ಟನ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿದ್ದ ಪಂದ್ಯಕ್ಕೆ ಮಳೆರಾಯನ ಅಡಚಣೆ ಉಂಟಾಯಿತು. ಶನಿವಾರ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ(34 ರನ್) ಮತ್ತು ಶುಭ್ ಮನ್ ಗಿಲ್ (28 ರನ್) ಉತ್ತಮ ಜೊತೆಯಾಟದ ಭರವಸೆ ಮೂಡಿಸಿದರು. ಆದರೆ ಜೇಮಿಸನ್ ಎಸೆದ ಓವರ್ ನ ಮೊದಲ ಎಸೆತದಲ್ಲೇ 34 ರನ್ ಗಳಿಸಿದ್ದ ರೋಹಿತ್ ಶರ್ಮಾ ಸೌಥಿಗೆ ಕ್ಯಾಚ್ ನೀಡಿ ಹೊರ ನಡೆದರು. ಬೆನ್ನಲ್ಲೇ 28 ರನ್ ಗಳಿಸಿದ್ದ ಗಿಲ್ ಕೂಡ ವಾಗ್ನರ್ ಬೌಲಿಂಗ್ ನಲ್ಲಿ ಔಟ್ ಆದರು.

ಟೆಸ್ಟ್ ಸ್ಪೆಶಲಿ‌ಸ್ಟ್ ಚೇತೇಶ್ವರ ಪೂಜಾರ ಕುಂಟುತ್ತ ಸಾಗಿದರೂ, ಎಂಟು ರನ್ ಗಳಿಸಿ, ಬೌಲ್ಟ್ ಮೋಡಗೆ ಒಳಗಾದರು. ಸದ್ಯ ಕ್ರೀಸ್‌ನಲ್ಲಿ ನಾಯಕ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಇನ್ನಿಂಗ್ಸ್ ಕಾಯ್ದುಕೊಂಡಿದ್ದಾರೆ.

ಇನ್ನು ನ್ಯೂಜಿಲೆಂಡ್ ಪರ ಜೇಮಿಸನ್, ವಾಗ್ನರ್  ಹಾಗೂ ಬೌಲ್ಟ್ ತಲಾ 1 ವಿಕಟ್ ಪಡೆದಿದ್ದಾರೆ.