Saturday, 14th December 2024

ಪಾಕಿಸ್ತಾನ ಕ್ರಿಕೆಟರ್‌ ಮುಹಮ್ಮದ್ ಆಮಿರ್ ಕ್ರಿಕೆಟ್ ಗೆ ವಿದಾಯ

ಕರಾಚಿ: ಪಾಕಿಸ್ತಾನ ಕ್ರಿಕೆಟರ್‌ ಮುಹಮ್ಮದ್ ಆಮಿರ್ ಎಲ್ಲಾ ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 28ರ ಹರೆಯದ ವೇಗಿ ಆಮಿರ್, ‘ನನಗೆ ಈಗಿನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮಂಡಳಿಯೊಂದಿಗೆ ಮುಂದುವರಿಯಲು ಸಾಧ್ಯ ವಾಗುತ್ತದೆ ಅಂತ ಅನ್ನಿಸುತ್ತಿಲ್ಲ. ಹಾಗಾಗಿ ವಿದಾಯದ ತೀರ್ಮಾನ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

ನನಗೆ ಈಗಿನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಹೊಂದಾಣಿಕೆಯಿಂದ ಇರಲು ಸಾಧ್ಯವಾಗುತ್ತಿಲ್ಲ. ನಾನು ಕ್ರಿಕೆಟ್ ನಿಂದ ದೂರ ಸರಿಯುತ್ತಿದ್ದೇನೆ. ನನಗೆ ಮಾನಸಿಕ ಹಿಂಸೆಯಾಗುತ್ತಿದೆ. 2010 ರಿಂದ 2015ರ ಅವಧಿಯಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ನಿಷೇಧದ ನಂತರ ತಂಡಕ್ಕೆ ಮರಳಲು ನನಗೆ ಶಾಹಿದ್ ಅಫ್ರಿದಿ ತುಂಬಾ ಸಹಾಯ ಮಾಡಿದ್ದು, ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಆಮಿರ್ ಹೇಳಿದ್ದಾರೆ.