ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೆಸ್ಟ್‌ನಲ್ಲಿ ಶಿಸ್ತುಬದ್ಧ ಬ್ಯಾಟಿಂಗ್‌ ನಡೆಸಿ; ಪಂತ್‌ಗೆ ಮಾಜಿ ಕೀಪರ್‌ ಸಲಹೆ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅವರು ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಪಂತ್‌ ನಾಲ್ಕು ಸಿಕ್ಸರ್‌ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಭಾರತ ಪರ ಅತ್ಯಧಿಕ ಟೆಸ್ಟ್‌ ಬಾರಿಸಿದ ಬ್ಯಾಟರ್‌ ಎನಿಸಿಕೊಳ್ಳಲಿದಾರೆ. ಸದ್ಯ ದಾಖಲೆ ಸೆಹವಾಗ್‌ ಹೆಸರಿನಲ್ಲಿದೆ. ಸೆಹವಾಗ್‌ 91 ಸಿಕ್ಸರ್‌ ಬಾರಿಸಿದಾರೆ.

ಮ್ಯಾಚೆಂಸ್ಟರ್‌: ರಿಷಭ್‌ ಪಂತ್‌(Rishabh Pant) ಅವರು ತಮ್ಮ ಅಪಾಯಕಾರಿ ಹೊಡೆತಗಳನ್ನು ಐಪಿಎಲ್‌ಗೆ ಮಾತ್ರ ಸೀಮಿತಗೊಳಿಸಿ ಟೆಸ್ಟ್‌ ಪಂದ್ಯಗಳಲ್ಲಿ ಶಿಸ್ತುಬದ್ಧವಾಗಿ ಬ್ಯಾಟಿಂಗ್ ನಡೆಸಬೇಕು ಎಂದು ಮಾಜಿ ವಿಕೆಟ್ ಕೀಪರ್ ಫಾರೂಖ್ ಎಂಜಿನಿಯರ್(Farokh Engineer) ಸಲಹೆ ನೀಡಿದ್ದಾರೆ.ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಪಂತ್ ಅದ್ಭುತ ಫಾರ್ಮ್ ನಲ್ಲಿದ್ದು, ಸರಣಿಯಲ್ಲಿ ಇದುವರೆಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಎಂಜಿನಿಯರ್, "ಖಂಡಿತ. ಐಪಿಎಲ್‌ಗಾಗಿ ಪಂತ್‌ ತಮ್ಮ ಅಪಾಯಕಾರಿ ಹೊಡೆತಗಳನ್ನು ಉಳಿಸಿಕೊಳ್ಳಲಿ. ಟೆಸ್ಟ್ ಕ್ರಿಕೆಟ್ ಶಿಸ್ತನ್ನು ಬಯಸುತ್ತದೆ. ಹೀಗಾಗಿ ಅವರು ಶಿಸ್ತುಬದ್ಧವಾಗಿ ಬ್ಯಾಟಿಂಗ್ ನಡೆಸಬೇಕು" ಎಂದು ಅಭಿಪ್ರಾಯಪಟ್ಟರು.

ಸೆಹವಾಗ್‌ ದಾಖಲೆ ಮೇಲೆ ಕಣ್ಣಿಟ್ಟ ಪಂತ್‌

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅವರು ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಪಂತ್‌ ನಾಲ್ಕು ಸಿಕ್ಸರ್‌ ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಭಾರತ ಪರ ಅತ್ಯಧಿಕ ಟೆಸ್ಟ್‌ ಬಾರಿಸಿದ ಬ್ಯಾಟರ್‌ ಎನಿಸಿಕೊಳ್ಳಲಿದಾರೆ. ಸದ್ಯ ದಾಖಲೆ ಸೆಹವಾಗ್‌ ಹೆಸರಿನಲ್ಲಿದೆ. ಸೆಹವಾಗ್‌ 91 ಸಿಕ್ಸರ್‌ ಬಾರಿಸಿದಾರೆ. ಪಂತ್‌ 88 ಸಿಕ್ಸ್‌ ಬಾರಿಸಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಪಂತ್ ಮೂರು ಪಂದ್ಯಗಳಿಂದ 425 ರನ್‌ ಗಳಿಸಿದ್ದಾರೆ.

ಪಂತ್ 40 ರನ್ ಬಾರಿಸಿದರೆ, ಭಾರತ ತಂಡದ ಪರ ಡಬ್ಲ್ಯುಟಿಸಿ ಇತಿಹಾಸದಲ್ಲಿ ಅತ್ಯಧಿಕ ರನ್‌ ಗಳಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ರೋಹಿತ್‌ ಶರ್ಮ (2,716 ರನ್) ಹೆಸರಿನಲ್ಲಿದೆ. ಪಂತ್‌ 2,677 ರನ್ ಗಳಿಸಿದ್ದಾರೆ.

ಮಾಜಿ ಆಟಗಾರ ವಿರಾಟ್ ಕೊಹ್ಲಿ(79 ಇನಿಂಗ್ಸ್, 2,617 ರನ್)3ನೇ ಸ್ಥಾನದಲ್ಲಿದ್ದಾರೆ. ಹಾಲಿ ನಾಯಕ ಶುಭಮನ್ ಗಿಲ್ 65 ಇನಿಂಗ್ಸ್ ಗಳಲ್ಲಿ 2,500 ರನ್ ಗಳಿಸಿದ್ದಾರೆ. ರವೀಂದ್ರ ಜಡೇಜ ಅವರು 64 ಇನಿಂಗ್ಸ್ ಗಳಲ್ಲಿ 2212 ರನ್ ಗಳಿಸಿ ಟಾಪ್-5ರಲ್ಲಿದ್ದಾರೆ.