Sunday, 13th October 2024

Paris Paralympics : ಪ್ಯಾರಾಲಿಂಪಿಕ್ಸ್‌ನಲ್ಲಿ 29 ಪದಕಗಳನ್ನು ಬಾಚಿಕೊಂಡು ಐತಿಹಾಸಿಕ ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳು

Paris Paralympics

ಪ್ಯಾರಿಸ್ : 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾಲಿಂಪಿಕ್ಸ್ ಅಥ್ಲೀಟ್‌ಗಳ ನಿಯೋಗವು (Paris Paralympics) ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿದಂತೆ 29 ಪದಕಗಳನ್ನು ಗೆಲ್ಲುವ ಮೂಲಕ ತನ್ನ ಅತ್ಯಂತ ಯಶಸ್ವಿ ಅಭಿಯಾನವನ್ನು ಕೊನೆಗೊಳಿಸಿತು. ಪ್ಯಾರಿಸ್ ಕ್ರೀಡಾಕೂಟವು ಒಟ್ಟಾರೆ ಪದಕ ಪಟ್ಟಿಯಲ್ಲಿ 18 ನೇ ಸ್ಥಾನ ಪಡೆದ ಭಾರತ ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ಹೆಗ್ಗುರುತನ್ನು ಸ್ಥಾಪಿಸಿದೆ. ಭಾರತವು ತನ್ನ ಹಿಂದಿನ ಎಲ್ಲ ದಾಖಲೆಯನ್ನು ಮೀರಿಸಿದೆ ಹಾಗೂ ಪ್ಯಾರಾ-ಕ್ರೀಡೆಗಳಲ್ಲಿ ಭಾರತ ಉದಯೋನ್ಮುಖ ಶಕ್ತಿಯಾಗಿ ಸ್ಥಾಪನೆಗೊಂಡಿದೆ.

ಭಾನುವಾರ ಮಹಿಳೆಯರ ಕಯಾಕ್ 200 ಮೀಟರ್ ಓಟದಲ್ಲಿ ಸ್ಪರ್ಧಿಸಿದ್ದ ಪೂಜಾ ಓಜಾ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲಗೊಂಡಾಗ ಭಾರತ ಅಭಿಯಾನ ಕೊನೆಗೊಂಡಿತು. ನಿರಾಶೆಯ ಹೊರತಾಗಿಯೂ, ಸ್ವಿಟ್ಜರ್ಲೆಂಡ್, ದಕ್ಷಿಣ ಕೊರಿಯಾ, ಬೆಲ್ಜಿಯಂ ಮತ್ತು ಅರ್ಜೆಂಟೀನಾದಂತಹ ಶಕ್ತಿಶಾಲಿ ದೇಶಗಳನ್ನು ಸೋಲಿಸುವ ಮೂಲಕ ಭಾರತವು ಅನೇಕ ಕ್ರೀಡೆಗಳಲ್ಲಿ ತನ್ನ ಗಮನಾರ್ಹ ಸಾಧನೆ ಮಾಡಿತು.

ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್ 41 ವಿಭಾಗದಲ್ಲಿ ನವದೀಪ್ ಸಿಂಗ್ ಚಿನ್ನ ಗೆದ್ದರು. ನವದೀಪ್ 47.32 ಮೀಟರ್ ಎಸೆಯುವ ಮೂಲಕ ಚೀನಾದ ಸನ್ ಪೆಂಗ್ಕ್ಸಿಯಾಂಗ್ ಅವರನ್ನು ಹಿಂದಿಕ್ಕಿ ಬೆಳ್ಳಿ ಪದಕ ಗೆದ್ದಿದ್ದರು. ಆದಾಗ್ಯೂ, ನಿಯಮ ಉಲ್ಲಂಘನೆಗಾಗಿ ಇರಾನ್‌ನ ಬೀಟ್ ಸಾಡೆಗ್ ಅನರ್ಹಗೊಂಡ ನಂತರ ಅವರ ಪದಕವನ್ನು ಚಿನ್ನಕ್ಕೆ ತೇರ್ಗಡೆಗೊಂಡರು. ಪೆಂಗ್ಕ್ಸಿಯಾಂಗ್ ಅವರನ್ನು ಬೆಳ್ಳಿ ಪಡೆದರು.

ಸಿಮ್ರಾನ್ ಶರ್ಮಾ ಮತ್ತು ಅವರ ಮಾರ್ಗದರ್ಶಿ ಅಭಯ್ ಸಿಂಗ್ ಮಹಿಳೆಯರ 200 ಮೀಟರ್ (ಟಿ 12) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟರು. 24 ವರ್ಷದ ಅಂಧ ಓಟಗಾರ್ತಿ 24.75 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಟ್ರ್ಯಾಕ್‌ & ಫೀಲ್ಡ್‌ನಲ್ಲಿ ಸಾಧನೆ

ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು ವಿಶೇಷವಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಯಶಸ್ವಿಯಾದರು, ನಾಲ್ಕು ಚಿನ್ನ ಸೇರಿದಂತೆ 17 ಪದಕಗಳನ್ನು ಪಡೆದರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪೋಡಿಯಂ ಫಿನಿಶ್ ಕಳೆದುಕೊಂಡ ನಂತರ ನವದೀಪ್ ಚಿನ್ನದ ಪದಕವನ್ನು ಗೆದ್ದರೆ , ಪ್ರೀತಿ ಪಾಲ್ 100 ಮೀಟರ್ ಮತ್ತು 200 ಮೀಟರ್ (ಟಿ 35) ಓಟಗಳಲ್ಲಿ ಎರಡು ಕಂಚಿನ ಪದಕಗಳೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಹಿಳಾ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ಸ್ಪರ್ಧೆಯಲ್ಲಿ ಶೂಟರ್ ಅವನಿ ಲೆಖಾರಾ ಟೋಕಿಯೊ 2020 ಪ್ರಶಸ್ತಿ ಯಶಸ್ವಿಯಾಗಿ ಉಳಿಸಿಕೊಂಡಿದ್ದಾರೆ. ಅವರು ಸತತ ಎರಡು ಬಾರಿ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ. ಪ್ಯಾರಾ ಬ್ಯಾಡ್ಮಿಂಟನ್‌fನಲ್ಲಿ ತುಳಸಿಮತಿ ಮುರುಗೇಶನ್ ಮಹಿಳಾ ಸಿಂಗಲ್ಸ್ ಎಸ್ಯು 5 ನಲ್ಲಿ ಬೆಳ್ಳಿ ಪದಕ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಮಹಿಳಾ ಪ್ಯಾರಾ-ಶಟ್ಲರ್‌ಗಳು ಭಾರತದ ಖಾತೆಗೆ ಇನ್ನೂ ಮೂರು ಪದಕಗಳನ್ನು ಸೇರಿಸಿದ್ದಾರೆ. ಇದು ಅವರ ಮೊದಲ ಪ್ಯಾರಾಲಿಂಪಿಕ್ಸ್ ಪೋಡಿಯಂ ಫಿನಿಶ್ ಆಗಿದೆ.

ಇದನ್ನೂ ಓದಿ: Vinesh Phogat : ವಿನೇಶ್‌ ಮಾಡಿದ್ದು ದೇಶದ್ರೋಹದ ಕೆಲಸ, ಒಲಿಂಪಿಕ್ಸ್‌ನಲ್ಲಿ 6 ಪದಕಗಳು ಸಿಗದಂತೆ ಮಾಡಿದರು; ಸಂಜಯ್ ಸಿಂಗ್

ಪುರುಷರ ಜಾವೆಲಿನ್ ಥ್ರೋ ಎಫ್ 64 ನಲ್ಲಿ ಪ್ರಾಬಲ್ಯ ಸಾಧಿಸಿದ ಸುಮಿತ್ ಆಂಟಿಲ್, ಟೋಕಿಯೊ 2020ರಿಂದ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ವಿಶ್ವ ದಾಖಲೆ ಮುರಿದರು. ಅವರು ಚಿನ್ನ ಗೆದ್ದರು. ಕೇವಲ 17 ವರ್ಷದ ಬಿಲ್ಲುಗಾರ್ತಿ ಶೀತಲ್ ದೇವಿ, ಪಾಲುದಾರ ರಾಕೇಶ್ ಕುಮಾರ್ ಅವರೊಂದಿಗೆ ಮಿಶ್ರ ತಂಡ ಕಾಂಪೌಂಡ್ ಓಪನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಅತ್ಯಂತ ಕಿರಿಯ ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏತನ್ಮಧ್ಯೆ, ಹರ್ವಿಂದರ್ ಸಿಂಗ್ ಬಿಲ್ಲುಗಾರಿಕೆಯಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗುವ ಮೂಲಕ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದರು. ಪುರುಷರ ಕ್ಲಬ್ ಥ್ರೋ ಎಫ್ 51 ಸ್ಪರ್ಧೆಯಲ್ಲಿ ಧರಮ್ಬೀರ್ 34.92 ಮೀಟರ್ ಎಸೆದು ಚಿನ್ನ ಗೆದ್ದರೆ, ಪ್ರಣವ್ ಸೂರ್ಮಾ ಬೆಳ್ಳಿ ಗೆದ್ದರು.

ಉಜ್ವಲ ಭವಿಷ್ಯ ಮುಂದಿದೆ

ಪ್ಯಾರಿಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವು ದೇಶದ ಪ್ಯಾರಾ-ಅಥ್ಲೀಟ್‌ಗಳಿಗೆ ಹೊಸ ಮಾನದಂಡ ನಿಗದಿಪಡಿಸಿದೆ. ಇದು ಮಹತ್ವಾಕಾಂಕ್ಷೆಯ ಕ್ರೀಡಾಪಟುಗಳ ಪೀಳಿಗೆಗೆ ಸ್ಫೂರ್ತಿ ನೀಡಿದೆ. ಅಥ್ಲೆಟಿಕ್ಸ್, ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್ ಮತ್ತು ಶೂಟಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬಲವಾದ ಪ್ರದರ್ಶನಗಳೊಂದಿಗೆ, ಭಾರತದ ಪ್ಯಾರಾಲಿಂಪಿಕ್ಸ್ ಪ್ರಯಾಣವು 2028 ರ ಲಾಸ್ ಏಂಜಲೀಸ್ ಕ್ರೀಡಾಕೂಟಕ್ಕೆ ಮತ್ತಷ್ಟು ಸ್ಫೂರ್ತಿ ನೀಡುವ ನಿರೀಕ್ಷೆಯಿದೆ.