Tuesday, 5th November 2024

 ಪಾಲ್‌ ಕಾಲಿಂಗ್‌ವುಡ್‌- ಇಂಗ್ಲೆಂಡ್‌ ಕ್ರಿಕೆಟ್‌ ಮಧ್ಯಂತರ ಪ್ರಧಾನ ಕೋಚ್‌

ಲಂಡನ್: ಇಂಗ್ಲೆಂಡ್‌ ಕ್ರಿಕೆಟ್ ಮಾಜಿ ನಾಯಕ, ಪಾಲ್‌ ಕಾಲಿಂಗ್‌ವುಡ್‌ ಅವರನ್ನು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಧ್ಯಂತರ ಪ್ರಧಾನ ಕೋಚ್‌ ಆಗಿ ನೇಮಿಸಲಾಗಿದೆ.

ಮುಂಬರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಕಾಲಿಂಗ್‌ವುಡ್‌ ಈ ಜವಾಬ್ದಾರಿ ನಿಭಾಯಿಸಲಿದ್ದಾರೆ. ಪ್ರತಿಷ್ಠಿತ ಆಯಸ್‌ನಲ್ಲಿ ಅನುಭವಿಸಿದ ಹೀನಾಯ ಸೋಲಿನ ಬಳಿಕ ಕೋಚ್‌ ಕ್ರಿಸ್‌ ಸಿಲ್ವರ್‌ವುಡ್‌ ಅವರನ್ನು ಕೆಳಗಿಳಿಸಲಾಗಿತ್ತು. ಇದನ್ನು ಇಂಗ್ಲೆಂಡ್‌ 3-2 ಅಂತರದಿಂದ ಸೋತಿತ್ತು.

ಕಾಲಿಂಗ್‌ವುಡ್‌ ಕಳೆದ ವೆಸ್ಟ್‌ ಇಂಡೀಸ್‌ ಪ್ರವಾಸದ ಟಿ20 ಸರಣಿ ವೇಳೆ ಇಂಗ್ಲೆಂಡ್‌ ತಂಡದ ಭಾಗವಾಗಿದ್ದರು.