Wednesday, 9th October 2024

ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬಾಕ್ಸರ್ ಪೂಜಾ ರಾಣಿ

ಟೋಕಿಯೋ : ಬಾಕ್ಸರ್ ಪೂಜಾ ರಾಣಿ ಟೋಕಿಯೊ ಒಲಿಂಪಿಕ್ಸ್’ನಲ್ಲಿ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದು ವರಿಸಿದ್ದಾರೆ.

ಬುಧವಾರ ನಡೆದ 16ನೇ ಸುತ್ತಿನಲ್ಲಿ ಅಲ್ಜೀರಿಯಾದ ಇಚ್ರಾಕ್ ಚೈಬ್ ಅವರನ್ನು ಸೋಲಿಸುವ ಮೂಲಕ ಮಹಿಳೆಯರ 75 ಕೆಜಿ ಮಿಡಲ್ ವೇಟ್ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದರು. ಹಾಲಿ ಏಷ್ಯನ್ ಚಾಂಪಿಯನ್ ಮತ್ತು ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಪೂಜಾ ರಾಣಿ, ಎದುರಾಳಿಯ ವಿರುದ್ಧ 5-0 ಗೆಲುವು ದಾಖಲಿಸಿದರು.

ಭಿವಾನಿಯ ಪೂಜಾ ಮೇ ತಿಂಗಳಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಚಿನ್ನ ಮತ್ತು ಈ ವರ್ಷದ ಮಾರ್ಚ್ ನಲ್ಲಿ ಬಾಕ್ಸಾಮ್ ಅಂತರರಾಷ್ಟ್ರೀಯ ಪಂದ್ಯಾವಳಿ ಯಲ್ಲಿ ವಿಶ್ವ ಚಾಂಪಿಯನ್ ಅಥೆನಾ ಬೈಲಾನ್ ವಿರುದ್ಧ ಗೆಲುವು ಸಾಧಿಸಿ, ಬೆಳ್ಳಿ ಗೆದ್ದಿದ್ದಾರೆ.

ಕಳೆದ ವರ್ಷ ಏಷ್ಯಾ-ಓಷಿಯಾನಿಯಾ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಮಹಿಳೆಯರ 75 ಕೆಜಿ ಯ ಕ್ವಾರ್ಟರ್ ಫೈನಲ್ ನಲ್ಲಿ ಪೋರ್ನ್ನಿಬಾ ಚೂಟಿ ವಿರುದ್ಧ ೫೦ ಗೆಲುವಿನೊಂದಿಗೆ ಪೂಜಾ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.