Monday, 4th November 2024

ಕಾರು ಅಪಘಾತ: ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ ಪಾರು

ಮೀರತ್‌ : ಮೀರತ್‌ನಲ್ಲಿರುವ ಕಮಿಷನರ್ ನಿವಾಸದ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಭಾರತದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ ಗಾಯ ಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರವೀಣ್ ಕುಮಾರ್ ಕಾರಿಗೆ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಕ್ಯಾಂಟರ್ ಚಾಲಕನನ್ನು ಬಂಧಿಸಿದ್ದಾ ರೆ.

ಪ್ರವೀಣ್ ಲ್ಯಾಂಡ್ ರೋವರ್ ಡಿಫೆಂಡರ್‌ ವಾಹನದಲ್ಲಿ ಪಾಂಡವ ನಗರ ಪ್ರದೇಶದಿಂದ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಕಮಿಷನರ್ ನಿವಾಸದ ಬಳಿ ಪ್ರವೀಣ್ ಆಗಮಿಸುತ್ತಿದ್ದಂತೆಯೇ ಎದುರಿನಿಂದ ವೇಗವಾಗಿ ಬಂದ ಕ್ಯಾಂಟರ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಪ್ರವೀಣ್ ಅವರ ವಾಹನಕ್ಕೆ ಹಾನಿಯಾಗಿದ್ದರೂ, ಅದೃಷ್ಟವಶಾತ್ ತಂದೆ-ಮಗ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.