Friday, 13th December 2024

ಕರ್ನಾಟಕದೆದುರು ಹಿಗ್ಗಿದ ಪಂಜಾಬ್‌

ಬೆಂಗಳೂರು: ಎರಡೂ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಎದುರು ಮುಗ್ಗರಿಸಿದೆ.

ಆಲೂರು ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರುಣ್ ನಾಯರ್ ಪಡೆ 9 ವಿಕೆಟ್‌ಗಳಿಂದ ಶರಣಾಯಿತು. ಮೊದಲ ಪಂದ್ಯದಲ್ಲಿ ಜಮ್ಮುಕಾಶ್ಮೀರ ತಂಡದ ಎದುರು ಜಯ ದಾಖಲಿಸಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 8 ವಿಕೆಟ್‌ಗೆ 125 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಪಂಜಾಬ್ ತಂಡ ಸಿಮ್ರಾನ್ ಸಿಂಗ್ (89*) ಹಾಗೂ ಅಭಿಷೇಕ್ ಶರ್ಮ (30ರನ್) ಜೋಡಿಯ ಅಬ್ಬರದಿಂದಾಗಿ 14.4 ಓವರ್‌ಗಳಲ್ಲಿ 127 ರನ್‌ಗಳಿಸಿ ಜಯದ ನಗೆ ಬೀರಿತು. ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಜಮ್ಮುಕಾಶ್ಮೀರ ಎದುರು ಜಯ ದಾಖಲಿಸಿತ್ತು.