Friday, 13th December 2024

ಪಂಜಾಬ್ ತಂಡದ ಸತತ 5ನೇ ಗೆಲುವು, ಪ್ಲೇಆಫ್ ಆಸೆ ಜೀವಂತ

ಶಾರ್ಜಾ: ಐಪಿಎಲ್-13ರಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸತತ 5 ಗೆಲುವಿನೊಂದಿಗೆ 4ನೇ ಸ್ಥಾನಕ್ಕೇರಿ ಪ್ಲೇಆಫ್​ ಅವಕಾಶ ವೃದ್ಧಿಸಿಕೊಂಡಿದೆ.

ಪ್ಲೇಆಫ್ ಗೆರಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ಧ ಸೋಮ ವಾರ 8 ವಿಕೆಟ್‌ಗಳಿಂದ ಸಲೀಸಾಗಿ ಗೆದ್ದಿದೆ. ಇದರಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಕೋಲ್ಕತ 5ನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ಪ್ಲೇಆಫ್ ಹೋರಾಟದಲ್ಲಿ ಪಂಜಾಬ್‌ ಮೇಲುಗೈ ಸಾಧಿಸಿದೆ. ಈ ಎರಡೂ ತಂಡಗಳಿಗೆ ತಲಾ ಎರಡು ಪಂದ್ಯಗಳು ಬಾಕಿಯಿವೆ. ಎರಡನ್ನೂ ಗೆದ್ದ ತಂಡ ಪ್ಲೇಆಫ್ ಗೆರಲಿದೆ.

ಆರಂಭಿಕ ಮಂದೀಪ್ ಸಿಂಗ್ ವೈಯಕ್ತಿಕ ಶೋಕದ ನಡುವೆಯೂ ಪಂಜಾಬ್ ಗೆಲುವಿನ ಹೀರೋ ಆಗಿ ಹೊರಹೊಮ್ಮಿದರು. ಮಂದೀಪ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ಬಲದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೋಲ್ಕತ ನೈಟ್‌ರೈಡರ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು.

ರನ್‌ ಬೆನ್ನತ್ತಲು ಹೊರಟ ಪಂಜಾಬ್‌ಗ ಕ್ರಿಸ್‌ ಗೇಲ್‌ ಮತ್ತು ಮನ್‌ದೀಪ್‌ ಸಿಂಗ್‌ ತಮ್ಮ ಅದ್ಭುತ ಬ್ಯಾಟಿಂಗ್‌ ಮೂಲಕ ನೆರವಾ ದರು. ನಾಯಕ ರಾಹುಲ್‌ ಬೇಗನೆ ಔಟಾದರೂ ಈ ಇಬ್ಬರು ತಂಡವನ್ನು ದಡ ಹತ್ತಿಸಿದರು. ಗೇಲ್‌ 29 ಎಸೆತದಲ್ಲಿ 2 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 51 ರನ್‌ ಚಚ್ಚಿದರು. ಸ್ವಲ್ಪ ನಿಧಾನವಾಗಿ ಆಡಿದರೂ ಸ್ಥಿರವಾಗಿ ಆಡಿದ ಮನ್‌ದೀಪ್‌ 56 ಎಸೆತದಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳ ಮೂಲಕ 66 ರನ್‌ ಗಳಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ ತೀವ್ರ ಕುಸಿತ ಅನುಭವಿಸಿತು. ಆದರೆ ಆರಂಭಕಾರ ಶುಬ¾ನ್‌ ಗಿಲ್‌ ಹಾಗೂ ನಾಯಕ ಇಯಾನ್‌ ಮಾರ್ಗನ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಸಾಹಸದಿಂದ ಹೀನಾಯ ಕುಸಿತದಿಂದ ಪಾರಾಯಿತು. ಗಿಲ್‌ ಬಹುಮೂಲ್ಯ 57 ರನ್‌ ಬಾರಿಸಿದರು. 45 ಎಸೆತಗಳ ಈ ಇನಿಂಗ್ಸ್‌ನಲ್ಲಿ 4 ಸಿಕ್ಸರ್‌, 3 ಬೌಂಡರಿ ಸೇರಿತ್ತು. ಮಾರ್ಗನ್‌ ಗಳಿಕೆ 25 ಎಸೆತಗಳಿಂದ 40 ರನ್‌ (5 ಬೌಂಡರಿ, 2 ಸಿಕ್ಸರ್‌).