ದುಬೈ: ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ (57ರನ್, 33 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಶ್ರೇಯಸ್ ಅಯ್ಯರ್ (53 ರನ್, 43 ಎಸೆತ, 3 ಬೌಂಡರಿ, 2 ಸಿಕ್ಸರ್) ಜೋಡಿಯ ಸಮಯೋಚಿತ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಮಾರಕ ದಾಳಿ ನೆರವಿ ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-13ರ ಪಂದ್ಯದಲ್ಲಿ ಜಯದ ನಗೆ ಬೀರಿತು.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ 13 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ 7 ವಿಕೆಟ್‌ಗೆ 161 ರನ್ ಕಲೆ ಹಾಕಿತು. ಪ್ರತಿಯಾಗಿ ರಾಜಸ್ಥಾನ ತಂಡ 8 ವಿಕೆಟ್‌ಗೆ 148 ರನ್ ಪೇರಿಸಿ, ಸೋಲೋಪ್ಪಿಕೊಂಡಿತು.
ಬೌಲರ್ ಎನ್ರಿಚ್ ನಾಟ್ಜೆ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಡೆಲ್ಲಿ ಕ್ಯಾಪಿಟಲ್ಸ್: 7 ವಿಕೆಟ್‌ಗೆ 161 ರನ್ (ಶಿಖರ್ ಧವನ್ 57, ಶ್ರೇಯಸ್ ಅಯ್ಯರ್ 53, ತುಷಾರ್ ದೇಶ್ಪಾಂಡೆ 37ಕ್ಕೆ 2, ಎನ್ರಿಚ್ ನಾಟ್ಜೆ 33ಕ್ಕೆ 2)
ರಾಜಸ್ಥಾನ ರಾಯಲ್ಸ್: 8 ವಿಕೆಟ್‌ಗೆ 148 ರನ್ (ಬೆನ್ ಸ್ಟೋಕ್ಸ್ 41, ರಾಬಿನ್ ಉತ್ತಪ್ಪ 32, ಸಂಜು ಸ್ಯಾಮ್ಸನ್ 25 ಮತ್ತು ಜಾಸ್ ಬಟ್ಲರ್ 22, ಜೋಫ್ರಾ ಆರ್ಚರ್ 19ಕ್ಕೆ 3, ಉನದ್ಕತ್ 32ಕ್ಕೆ 2 )