Saturday, 14th December 2024

ರಾಜ್‌ಕುಮಾರ್ ಶರ್ಮ ದೆಹಲಿ ರಣಜಿ ತಂಡದ ಕೋಚ್ ಆಗಿ ನೇಮಕ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ, 2020-21ನೇ ಸಾಲಿನ ದೇಶೀಯ ಕ್ರಿಕೆಟ್‌ನ ಋತುವಿಗೆ ದೆಹಲಿ ರಣಜಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಮಾಜಿ ಆಟಗಾರ, 55 ವರ್ಷದ ರಾಜ್‌ಕುಮಾರ್, ಕಳೆದ ವರ್ಷ ದೆಹಲಿ ತಂಡಕ್ಕೆ ಬೌಲಿಂಗ್ ಸಲಹೆಗಾರರಾಗಿದ್ದ ವೇಳೆ, ಕೆಪಿ ಭಾಸ್ಕರ್ ತಂಡದ ಮುಖ್ಯಕೋಚ್ ಆಗಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ರಾಜ್‌ಕುಮಾರ್, ಐಸಿಸಿ ಸಹಾಯಕ ಸದಸ್ಯತ್ವ ಹೊಂದಿರುವ ಮಾಲ್ಟಾ ತಂಡದ ಕೋಚ್ ಆಗಿದ್ದರು.

ರಾಜ್‌ಕುಮಾರ್ ಮಾರ್ಗದರ್ಶನದಲ್ಲೇ 23 ವಯೋಮಿತಿ ದೆಹಲಿ ತಂಡ, ಸಿಕೆ ನಾಯುಡು ಟ್ರೋಫಿ ಗೆದ್ದುಕೊಂಡಿತ್ತು. ಭಾರತ ತಂಡದ ಮಾಜಿ ಆಟಗಾರ ಗುರುಶರಣ್‌ಸಿಂಗ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ.