Saturday, 12th October 2024

ದೇಶೀಯ ಪಂದ್ಯಾವಳಿಗಳಿಗೆ ದಿನಾಂಕ ಪ್ರಕಟ

ಮುಂಬೈ: ಕೋವಿಡ್ 19 ಸೋಂಕಿನ ಕಾರಣದಿಂದ ಕಳೆದ ಬಾರಿ ರದ್ದಾಗಿದ್ದ ರಣಜಿ ಟ್ರೋಫಿಯನ್ನು ಈ ಬಾರಿ ನಡೆಸಲು ಬಿಸಿಸಿಐ ಸಜ್ಜಾಗಿದೆ.

ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ದೇವಧರ್ ಟ್ರೋಫಿಗಳ ದಿನಾಂಕ ಪ್ರಕಟಿಸಲಾಗಿದೆ. 2021-22ರ ಸಾಲಿನ ರಣಜಿ ಟ್ರೋಫಿ ಕೂಟ ಜನವರಿ 5ರಿಂದ ಮಾರ್ಚ್ 20ರವರೆಗೆ ನಡೆಯಲಿದೆ.

ಟಿ20 ಕೂಟವಾದ ಸಯ್ಯದ್ ಮುಷ್ತಾಕ್ ಅಲಿ ಕೂಟ ಅಕ್ಟೋಬರ್ 27ರಿಂದ ಆರಂಭವಾಗಲಿದೆ. ವಿಜಯ್ ಹಜಾರೆ ಟ್ರೋಫಿ ಕೂಟವನ್ನು ಡಿಸೆಂಬರ್ 1ರಿಂದ 29ರವರಗೆ ನಡೆಯಲಾಗುವುದು. ವನಿತೆಯರ ನ್ಯಾಶನಲ್ ಏಕದಿನ ಕೂಟ ಅ.20ರಿಂದ ನ.20ರವರೆಗೆ ನಡೆಯಲಿದೆ. ತಲಾ ಆರು ತಂಡಗಳೊಂದಿಗೆ ಐದು ಎಲೈಟ್ ಗುಂಪುಗಳು ಮತ್ತು ಎಂಟು ತಂಡಗಳೊಂದಿಗೆ ಒಂದು ಪ್ಲೇಟ್ ಗುಂಪು ಇರುತ್ತದೆ.

ಈ ಮೂರು ಪಂದ್ಯಾವಳಿಗಳಿಗೆ 38 ತಂಡಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದೆ.