ನವದೆಹಲಿ : ಫೆಬ್ರವರಿ 16 ರಿಂದ ಮಾರ್ಚ್ 5ರ ನಡುವೆ ರಣಜಿ ಟ್ರೋಫಿ 2022 ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಜ್ಜಾಗಿದೆ.
ಕೋಲ್ಕತ್ತಾ, ಅಹಮದಾಬಾದ್, ಚೆನ್ನೈ ಮತ್ತು ಕಟಕ್ ಎಲೈಟ್ ಗ್ರೂಪ್ ಪಂದ್ಯಗಳಿಗೆ ಸಂಭವ ನೀಯ ಸ್ಥಳಗಳಾಗಿವೆ. ತಲಾ ನಾಲ್ಕು ತಂಡಗಳ ಎಂಟು ಗುಂಪುಗಳು ಈ ಬಾರಿ ಕಾಣಿಸಿಕೊಳ್ಳಲಿದೆ. 6 ತಂಡದ ಪ್ಲೇಟ್ ಗುಂಪಿನ ಪಂದ್ಯಗಳು ಏಕಕಾಲದಲ್ಲಿ ನಡೆಯಲಿವೆ.
ಜನವರಿಯಲ್ಲಿ ನಡೆದ ತನ್ನ ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಬಿಸಿಸಿಐ, ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಯ ಆರಂಭವನ್ನ ಅನೇಕ ಬಾರಿ ಮರು ನಿಗದಿಪಡಿಸಿದ ನಂತರ ರಣಜಿ ಟ್ರೋಫಿಯನ್ನು ಮುಂದೂಡುವುದಾಗಿ ಘೋಷಿಸಿತ್ತು.
ಪ್ರಧಾನ ದೇಶೀಯ ಪಂದ್ಯಾವಳಿಯು 2020-21ರ ಋತುವಿನಲ್ಲಿ ನಡೆಸಲಿಲ್ಲ. ಆದರೆ, ಈ ವರ್ಷದ ಆರಂಭದಲ್ಲಿ ರದ್ದಾದ ದೇಶೀಯ ಪಂದ್ಯಗಳಿಗೆ ಆಟಗಾರರಿಗೆ ಪರಿಹಾರ ನೀಡಲಾಯಿತು.