Sunday, 13th October 2024

ಸರ್‌ ಜಡೇಜಾ ಆಲ್ರೌಂಡರ್‌‌ ಆಟ, ಮೊದಲ ಸೋಲು ಕಂಡ ಆರ್‌ಸಿಬಿ

ಮುಂಬೈ : ರವೀಂದ್ರ ಜಡೇಜ ಅವರ ಆಲ್ ರೌಂಡ್ ಆಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಸೋಲಿನ ರುಚಿ ನೀಡಿದೆ. ಐಪಿಎಲ್ ನ 19ನೇ ಪಂದ್ಯದಲ್ಲಿ 69 ರನ್ ಗಳ ಅಂತರದಿಂದ ಮಣಿಸಿತು. ಈ ಮೂಲಕ ಆರ್ ಸಿಬಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು.

ಗೆಲ್ಲಲು 192 ರನ್ ಕಠಿಣ ಗುರಿ ಬೆನ್ನಟ್ಟಿದ ಆರ್ ಸಿಬಿ ಸ್ಪಿನ್ನರ್ ಗಳಾದ ರವೀಂದ್ರ ಜಡೇಜ(3-13) ಹಾಗೂ ಇಮ್ರಾನ್ ತಾಹಿರ್(2-16) ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು.

ನಾಯಕ ವಿರಾಟ್ ಕೊಹ್ಲಿ ಕೇವಲ 8 ರನ್ ಗಳಿಸಿ ಕರ್ರನ್ ಗೆ ವಿಕೆಟ್ ಒಪ್ಪಿಸಿದರು. ವಾಷಿಂಗ್ಟನ್ ಸುಂದರ್ (7), ಎಬಿಡಿ ವಿಲಿ ಯರ್ಸ್ (4), ಡೇನಿಯಲ್ ಕ್ರಿಸ್ಟಿಯನ್ (1) ಒಂದಂಕಿಗೆ ಔಟಾದರು. ದೇವದತ್ತ ಪಡಿಕ್ಕಲ್ (34, 15 ಎಸೆತ), ಗ್ಲೆನ್ ಮ್ಯಾಕ್ಸ್ ವೆಲ್ (22) ಹಾಗೂ ಜಮೀಸನ್ (16)ಎರಡಂಕೆಯ ಸ್ಕೋರ್ ಗಳಿಸಿದರು.

ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ರವೀಂದ್ರ ಜಡೇಜ(ಔಟಾಗದೆ 62) ಹಾಗೂ ಎಫ್ ಡು ಪ್ಲೆಸಿಸ್(50) ಅರ್ಧಶತಕಗಳ ಕೊಡುಗೆಯ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.

ಜಡೇಜ ಅವರ ಆಲ್ ರೌಂಡ್ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವನ್ನು ಐಪಿಎಲ್ ನ 19ನೇ ಪಂದ್ಯದಲ್ಲಿ 69 ರನ್ ಗಳ ಅಂತರದಿಂದ ಮಣಿಸಿತು.