Friday, 13th December 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 197 ರನ್ ಟಾರ್ಗೆಟ್

ದುಬಾಯಿ: ಆರಂಭಿಕ ಆಟಗಾರ ಪೃಥ್ವೀ ಅವರ ಬ್ಯಾಟಿಂಗ್, ಮಾರ್ಕಸ್ ಸ್ಟೋಯ್ನ್ಸ್ ಮತ್ತು ರಿಷಭ್ ಪಂತ್ ಅವರ ಹೊಡೆಬಡಿಯ ಜೊತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗೆ 197 ರನ್ ಗಳ ಗುರಿ ನೀಡಿದೆ.

ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಜೋಡಿ ಪೃಥ್ವೀ ಶಾ (42) ಮತ್ತು ಅನುಭವಿ ಬ್ಯಾಟ್ಸ್ ಮನ್ ಶಿಖರ್ ಧವನ್ (32) ಮೊದಲ ವಿಕೆಟಿಗೆ 68 ರನ್ ಜೊತೆಯಾಟ ಕಟ್ಟಿದರು.

23 ಎಸೆತಗಳಲ್ಲಿ 42 ರನ್ ಗಳಿಸಿದ್ದ ಪೃಥ್ವೀ ಶಾ, ಶಿಖರ್ ಧವನ್ (32), ನಾಯಕ ಶ್ರೇಯಸ್ ಅಯ್ಯರ್ (11) ಔಟಾಗುತ್ತಲೇ ಕ್ಯಾಪಿಟಲ್ಸ್ ಸ್ಥಿತಿ 90 ರನ್ನಿಗೆ 3 ವಿಕೆಟ್ ಆಗಿತ್ತು. ಈ ಹಂತದಲ್ಲಿ ಜೊತೆಯಾದ ರಿಷಭ್ ಪಂತ್ ಹಾಗೂ ಹೊಡೆಬಡಿಯ ದಾಂಢಿಗ ಮಾರ್ಕಸ್ ಸ್ಟೋಯ್ನ್ಸ್ ಸೇರಿಕೊಂಡು ಬಿರುಸಿನ ಆಟಕ್ಕಿಳಿದರು. ಈ ಜೋಡಿ ಕೇವಲ 45 ಎಸೆತಗಳಲ್ಲಿ 89 ರನ್ ಗಳ ಉತ್ತಮ ಜೊತೆಯಾಟ ನೀಡಿದರು.

ರಿಷಭ್ 25 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರೆ, ಸ್ಟೋಯ್ನ್ಸ್ 26 ಎಸೆತಗಳಲ್ಲಿ 53 ರನ್ ಸಿಡಿಸಿ ಔಟಾಗದೇ ಉಳಿದರು. ಅಂತಿಮವಾಗಿ, ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟದಲ್ಲಿ 196 ರನ್ ಗಳಿಸಿತು.