Saturday, 14th December 2024

ಚೆನ್ನೈ ವಿರುದ್ದದ ಪಂದ್ಯಕ್ಕೆ ಆರ್‌.ಸಿ.ಬಿಯಿಂದ ಹಸಿರು ಜರ್ಸಿ ಅಭಿಯಾನ

ದುಬೈ : ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾನುವಾರ ತಮ್ಮ ಗೋ ಗ್ರೀನ್ ಭಾಗವಾಗಿ ಹಸಿರು ಜರ್ಸಿಯನ್ನು ಧರಿಸಲಿದೆ. ಪರಿಸರ ಸಂರಕ್ಷಣೆ ಕುರಿತು ಸಂದೇಶವನ್ನು ಹರಡಲು ಬೆಂಗಳೂರು ಮೂಲದ ಫ್ರ್ಯಾಂಚೈಸ್ ಹಸಿರು ಜರ್ಸಿಯನ್ನು ಧರಿಸಲಿದೆ.

ಫ್ರ್ಯಾಂಚೈಸ್ ಹಿಂದಿನ ಆವೃತ್ತಿಯಲ್ಲೂ ಹಸಿರು ಉಡುಪನ್ನು ಧರಿಸಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು 2011 ರ ಸೀಸನ್ ನಿಂದಲೂ ಈ ಅಭ್ಯಾಸವನ್ನು ಮುಂದುವರಿಸಿದೆ.

2016 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಸೈಕಲ್‌ನಲ್ಲಿ ಕ್ರೀಡಾಂಗಣ ತಲುಪಲು ಮುಂದಾದರು ಮತ್ತು ಅಭಿಮಾನಿಗಳಿಗೆ ಕ್ರೀಡಾಂಗಣ ತಲುಪಲು ಸಿಎನ್‌ಜಿ ರಿಕ್ಷಾಗಳನ್ನು ವ್ಯವಸ್ಥೆಗೊಳಿಸಲಾಯಿತು. ಕಳೆದ ವರ್ಷ, ಫ್ರ್ಯಾಂಚೈಸ್ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸಿತು. ಈ ಸೀಸನ್ ನಲ್ಲಿ ಅವರು ‘ಗ್ರಹವನ್ನು ಕ್ಲೀನ್ ಆಗಿ ಮತ್ತು ಆರೋಗ್ಯಕರವಾಗಿರಿಸಿ ಕೊಳ್ಳುವ’ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.